ಎಸ್ ಡಿ ಪಿ ಐ ವತಿಯಿಂದ ನೀಡಿದ ನೀರಿನ ಪಂಪ್ ಸೆಟ್ ಮತ್ತುಪೈಪ್ ಲೈನ್ ಉದ್ಘಾಟನೆ

Prasthutha: April 13, 2021

ಉಳ್ಳಾಲ :  ಅಳೇಕಲ ವಾರ್ಡ್ ನಲ್ಲಿನ ಕುಡಿಯುವ ನೀರಿಸ ಸಮಸ್ಯೆಗೆ ಸ್ಪಂದಿಸಿದ ಎಸ್ ಡಿ‌ ಪಿ ಐ ನಗರ ಸಮಿತಿ ವತಿಯಿಂದ ದಾನಿಯಾದ ಅಲೀಮಮ್ಮ ಕೋಡಿ ಇವರು ನೀಡಿರುವ ಪಂಪ್ ಸೆಟ್ ಅನ್ನು ಎಸ್ ಡಿ ಪಿಐ ಕಾರ್ಯಕರ್ತರು ಶ್ರಮದಾನದ ಮೂಲಕ‌ ಪೈಪ್ ಲೈನ್ ಅಳವಡಿಸಿದ ಕಾಮಗಾರಿಯನ್ನು ಉದ್ಘಾಟನೆಗೊಳಿಸಲಾಯಿತು.

ಕಾರ್ಯಕ್ರಮವನ್ನು ಹಳೇಕೋಟೆ ಖತೀಬರಾದ ಮಹಮ್ಮದ್ ಅಲಿ ಮದನಿಯವರ ದುವಾ ಆಶಿರ್ವಚನದೊಂದಿಗೆ ಆರಂಬಿಸಲಾಯಿತು. ಪಂಪ್ ಸೆಟ್ ಉದ್ಘಾಟನೆಯನ್ನು SDPI ಉಳ್ಳಾಲ ನಗರ ಸಮಿತಿ ಅದ್ಯಕ್ಷರಾದ ಎ ಅರ್ ಅಬ್ಬಾಸ್ ಉದ್ಘಾಟಿಸಿದರು. ನೀರಿನ‌ ಪೈಪ್ ಲೈನ್ ಅನ್ನು SDPI ಅಳೇಕಲ ಅಧ್ಯಕ್ಷರಾದ ಸಾದಿಕ್ ಯುಬಿ ಉದ್ಘಾಟಿಸಿದರು. ಇಮ್ತಿಯಾಝ್ ಅಳೇಕಲ, ಸ್ವಾಗತಿಸಿದರು ಎಸ್ ಡಿ ಪಿ ಐ ಜಿಲ್ಲಾ  ನಾಯಕರಾದ ಝಾಕಿರ್ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಳೇಕಲ ವಾರ್ಡ್ ನ ನಗರಸಭಾ ಸದಸ್ಯರಾದ ಅಸ್ಗರ್ ಅಲಿ ಉಳ್ಳಾಲರವರ ವಿಶೇಷ ಮುತುವರ್ಜಿಯಿಂದ ನಡೆದ ಈ ಕಾಮಾಗಾರಿಯಿಂದಾಗಿ ಸುತ್ತಮುತ್ತಲಿನ ಹಲವು ಕುಟುಂಬಗಳಿಗೆ ಕುಡಿಯುವ  ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸಮಾರಂಭದಲ್ಲಿ ಮುಸ್ಲಿಂ ಒಕ್ಕೂಟ ಉಳ್ಳಾಲದ ಅದ್ಯಕ್ಷರಾದ ಇಸ್ಮಾಯಿಲ್ ಉಳ್ಳಾಲ,  ನಗರಸಭಾ ಸದಸ್ಯರಾದ ಅಸ್ಗರ್ ಅಲಿ, ರವೂಪ್ ಹಳೇಕೋಟೆ, ರಮೀಝ್ ಕೋಟೆಪುರ,  ಎಸ್ ಡಿ ಪಿ ಐ ನಾಯಕರಾದ ಇಮ್ತಿಯಾಝ್ ಕೋಟೆಪುರ, ತನ್ವೀರ್ ಮೈಂದಾಳ, ಅಲ್ತಾಫ್  ಉಳ್ಳಾಲ ಮತ್ತು ಅಳೇಕಲ ವಾರ್ಡ್ ನ ಸಾರ್ವಜನಿಕರು ಉಪಸ್ಥಿತರಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!