ರಾಜ್ಯ ಸರಕಾರದಿಂದ ರಂಝಾನ್ ಆಚರಣೆಗೆ ಕೋವಿಡ್ ಮಾರ್ಗಸೂಚಿ ಬಿಡುಗಡೆ !

Prasthutha|

►ಕಂಟೋನ್ಮೆಂಟ್ ಪ್ರದೇಶಗಳಲ್ಲಿ ಮಸೀದಿಗಳು ಬಂದ್ !

- Advertisement -

ಬೆಂಗಳೂರು : ಉತ್ತರಖಂಡದ ಹರಿದ್ವಾರದಲ್ಲಿ ಕುಂಭಮೇಳ ಆಚರಣೆಗೆಂದು 40 ಲಕ್ಷಕ್ಕೂ ಅಧಿಕ ಭಕ್ತರು ಬೃಹತ್ ಸಂಖ್ಯೆಯಲ್ಲಿ ಸೇರಿರುವ ಸುದ್ದಿಗಳು ವಿವಾದವಾಗಿರುವ ಮಧ್ಯೆಯೇ ಕರ್ನಾಟಕ ರಾಜ್ಯ ಸರಕಾರ ರಂಝಾನ್ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಂಜಾನ್ ಉಪವಾಸ ವ್ರತಾಚರಣೆ ಇಂದಿನಿಂದ ಆರಂಭವಾಗಿದೆ.

ರಂಝಾನ್ ಮಾರ್ಗಸೂಚಿಯ ಪ್ರಕಾರ ಪ್ರಾರ್ಥನೆಗೆ ಐದು ನಿಮಿಷ ಮೊದಲು ಮಸೀದಿ ಓಪನ್ ಮಾಡಬೇಕು. ಕಂಟೈನ್ಮೆಂಟ್ ಝೋನ್ ಗಳಲ್ಲಿ ಇರುವ ಮಸೀದಿಗಳನ್ನು ಬಂದ್ ಮಾಡಬೇಕು. ನಮಾಝ್ ಮಾಡುವ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

- Advertisement -

ಪ್ರತಿದಿನದ ಇಫ್ತಿಯಾರ್ ಕೂಟಕ್ಕೆ ಮಸೀದಿಗಳಲ್ಲಿ ಅವಕಾಶ ಇರುವುದಿಲ್ಲ. ಉಪವಾಸ ಬಿಡುವಾಗ ಮಸೀದಿಗೆ ಆಹಾರ ವಸ್ತು ತರಬಾರದು. ಮನೆಯಲ್ಲಿಯೇ ಉಪವಾಸ ಬಿಡಬೇಕು. ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿರುತ್ತದೆ. ವಝುವನ್ನು ಮನೆಯಲ್ಲಿಯೇ ಮಾಡಿಕೊಂಡು ಬರಬೇಕು. ಮಸೀದಿಗೆ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಬೇಕು. ಸಾಮೂಹಿಕ ಕಾರ್ಪೇಟ್ ಬಳಸುವ ಬದಲು ಪ್ರಾರ್ಥನೆ ಗೆ ವೈಯಕ್ತಿಕ ಕಾರ್ಪೆಟ್ ಬಳಕೆ ಮಾಡಬೇಕು ಎಂದು ಸೂಚಿಸಲಾಗಿದೆ.

ನಮಾಝ್ ಮಾಡುವುದಕ್ಕೆ ಮೂರು ಪಾಳಿಯ ಸಮಯವನ್ನು ನಿಗದಿಪಡಿಸಲಾಗಿದೆ. 12.45 ರಿಂದ 1.15 , 1.30 ರಿಂದ 2.00 ಮತ್ತು 2.30 ರಿಂದ 3.00 ಹೀಗೆ ಸಮಯ ನಿಗದಿಪಡಿಸಲಾಗಿದೆ. ಈ ರಂಝಾನ್ ಮಾರ್ಗಸೂಚಿ ರಾಜ್ಯಾದ್ಯಂತ ಅನ್ವಯ ಎಂದು ತಿಳಿಸಲಾಗಿದೆ.

Join Whatsapp