ಕೋ-ವಿನ್ 2.0 ದಲ್ಲಿ ನೋಂದಣಿಗಾಗಿ ವಿಶಿಷ್ಟ ವಿಶೇಷ ಚೇತನರ ಯುಡಿಐಡಿ ಸ್ವೀಕಾರಾರ್ಹ: ಕೇಂದ್ರದಿಂದ ರಾಜ್ಯಕ್ಕೆ ಸೂಚನೆ

Prasthutha|

ಈ ವರ್ಷದ ಜನವರಿ 16 ರಿಂದ ಸುಗಮ ಮತ್ತು ಪರಿಣಾಮಕಾರಿ ಲಸಿಕೀರಣದ ಪ್ರಕ್ರಿಯೆಯನ್ನು ಸಾರ್ವತ್ರಿಕವಾಗಿ ಸುಗಮಗೊಳಿಸಲು ಕೋ-ವಿನ್ 2.0 ದಲ್ಲಿ ನೋಂದಣಿಗಾಗಿ ವಿಶಿಷ್ಟ ವಿಶೇಷ ಚೇತನರ ಗುರುತಿನ ಚೀಟಿ [ಯುಡಿಐಡಿ] ಇದೀಗ ಸ್ವೀಕರಿಸಬಹುದು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ತಿಳಿಸಿದೆ.

- Advertisement -

ಮಾರ್ಚ್ 2, 2021 ರಂದು ಹೊರಡಿಸಲಾದ ಮಾರ್ಗಸೂಚಿ ಟಿಪ್ಪಣಿ ಪ್ರಕಾರ ಕೋ-ವಿನ್ 2.0 ದಡಿ ಏಳು ವಿವಿಧ ರೀತಿಯ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಫಲಾನುಭವಿಗಳ ಪರಿಶೀಲನೆಗಾಗಿ ನಿಗದಿಪಡಿಸಲಾಗಿದೆ ಮತ್ತು ಸೂಚಿಸಲಾಗಿದೆ.  

ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. ವಿಶೇಷ ಚೇತನರ ಸಬಲೀಕರಣ ಇಲಾಖೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡಿರುವ ಯುಡಿಐಡಿ ಚೀಟಿಯಲ್ಲಿ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ವ್ಯಕ್ತಿಯ ಎಲ್ಲಾ ವಿಶಿಷ್ಟ್ಯ ಮಾಹಿತಿ ಲಭ್ಯವಿದೆ ಮತ್ತು ಕೋವಿಡ್ – 19 ಲಸಿಕೆಗಾಗಿ ಎಲ್ಲಾ ಮಾನದಂಡಗಳನ್ನು ಇದು ಪೂರೈಸುತ್ತದೆ. 

- Advertisement -

ಆದ್ದರಿಂದ ವಿಶೇಷ ಚೇತನ ವ್ಯಕ್ತಿಗಳ ಲಸೀಕರಣ ಪ್ರವೇಶವನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಕೋವಿಡ್ – 19 ಲಸಿಕೀಕರಣಕ್ಕಾಗಿ ನಿಗದಿತ ಭಾವಚಿತ್ರವಿರುವ ಯುಡಿಐಡಿಯನ್ನು ಗುರುತಿನ ಚೀಟಿ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಅಗತ್ಯವಾದ ನಿಬಂಧನೆಗಳನ್ನು ರಚಿಸಲಾಗಿದೆ ಮತ್ತು ಶೀಘ್ರದಲ್ಲೇ ಕೊ – ವಿನ್ ನಲ್ಲಿ ಇದು ಲಭ್ಯವಾಗಲಿದೆ.

ಕೋವಿಡ್ ಲಸಿಕಾಕರಣದಲ್ಲಿ ಯುಡಿಐಡಿ ಕಾರ್ಡ್ ಅನ್ನು ಭಾವಚಿತ್ರವಿರುವ ಗುರುತಿನ ಚೀಟಿಯಾಗಿ ಬಳಸುವ ಕುರಿತಂತೆ ಪ್ರಚಾರ ಮಾಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

Join Whatsapp