‘ನಾನು ಹಿಂದೂವಾಗಿ ನಾಚಿಕೆಪಡುತ್ತೇನೆ’: ಮುಸ್ಲಿಮರ ಮೇಲಿನ ದಾಳಿಗೆ ಬಾಲಿವುಡ್ ನಟಿ ಪ್ರತಿಕ್ರಿಯೆ

Prasthutha: October 23, 2021

ಮುಂಬೈ: ಇಲ್ಲಿನ ಗುರುಗ್ರಾಮ್ ನಲ್ಲಿ ಮುಸ್ಲಿಮರು ನಡೆಸುತ್ತಿದ್ದ ಶುಕ್ರವಾರದ ಪ್ರಾರ್ಥನೆಯನ್ನು ತಡೆದ ಸಂಘಪರಿವಾರದ ಕಾರ್ಯಕರ್ತರ ಕ್ರಮವನ್ನು ಬಾಲಿವುಡ್ ನಟಿ ಸ್ವರ ಭಾಸ್ಕರ್ ಖಂಡಿಸಿದ್ದು, ಸ್ವರಾ ಅವರು  “ನಾನು ಹಿಂದೂವಾಗಿ ನಾಚಿಕೆಪಡುತ್ತೇನೆ” ಎಂದು ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಸಂಘ ಪರಿವಾರದ ಕಾರ್ಯಕರ್ತರು ಈದ್ಗಾ ಮೈದಾನವೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಸುತ್ತಿದ್ದ ಮುಸ್ಲಿಮರ ಮೇಲೆ ದಾಳಿ ನಡೆಸಿದ್ದರು. ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಬಂದ ಗುಂಪೊಂದು ಬೊಬ್ಬೆ ಹಾಕುತ್ತಾ ಪ್ರಾರ್ಥನೆಗೆ ಅಡ್ಡಿಪಡಿಸಿದ್ದರು.

ಈ ಹಿಂದೆ ಶಾರೂಖ್ ಖಾನ್ ಬೆಂಬಲಕ್ಕೆ ನಿಂತ ಸ್ವರ ವಿರುದ್ಧ ಸಂಘಪರಿವಾರ ದ್ವೇಷದ ಅಭಿಯಾನವೇ ನಡೆಸಿತ್ತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!