ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದಕ್ಕೆ ಅರ್ಥವಿದೆಯೇ: ಕೇಂದ್ರದ ವಿರುದ್ಧ ಪೇಜಾವರ ಶ್ರೀ ಆಕ್ರೋಶ

Prasthutha|

►ರಾಜಕಾರಣಿಗಳು ಯಾರನ್ನೂ ಪ್ರಚೋದಿಸಬಾರದು

- Advertisement -

ಬಾಗಲಕೋಟೆ: ಪ್ರಜೆಗಳು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎನ್ನುವುದಾದರೆ, ಮೊದಲು ಸರ್ಕಾರಗಳು ಮುಂದೆ ಬಂದು ಇಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಮಾಡಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕಾರಣಿಗಳು ಯಾರನ್ನೂ ಪ್ರಚೋದಿಸಬಾರದು, ಯಾರನ್ನೂ ಓಲೈಕೆ ಮಾಡದೇ ಎಲ್ಲರನ್ನೂ ಸಮಾನವಾಗಿ ನೋಡಬೇಕಾಗಿದೆ ಎಂದು ಹೇಳಿದರು.


ಚುನಾವಣೆ ಸಮಯದಲ್ಲಿ ಮತೀಯ ವಿಚಾರವಾಗಿ ಚರ್ಚೆಗಳು ಬರುತ್ತವೆ. ನಂತರ ಕಡಿಮೆ ಆಗುತ್ತದೆ. ಮತಗಳನ್ನು ಪಡೆಯಲು ಒಂದೊಂದು ಬಗೆಯ ಹೇಳಿಕೆ ನೀಡಿ, ಜಾತಿಯ ಮತಗಳನ್ನು ಪಡೆದುಕೊಳ್ಳುವುದಕ್ಕೆ ಯತ್ನಿಸುತ್ತಾರೆ. ಇದರಿಂದ ಸಮಾಜದಲ್ಲಿ ಮತೀಯ ಸಾಮರಸ್ಯ ಕೆಡುತ್ತದೆ. ಆದ್ದರಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಕೆದಡುವಂತಹ ಕೆಲಸ ಆಗಬಾರದು ಎಂದು ಸಲಹೆ ನೀಡಿದರು.

- Advertisement -


ಸರ್ವ ಮತೀಯರಿಗೆ ನೆಮ್ಮದಿಯಿಂದ ಬಾಳಲು ಏನು ವ್ಯವಸ್ಥೆ ಬೇಕು ಅದನ್ನು ಸರ್ಕಾರವೇ ಮುಂದೆ ನಿಂತು ಮಾಡಬೇಕು. ಸರ್ಕಾರ ಇರುವುದು ಯಾಕೆ? ಎಂದು ಪ್ರಶ್ನೆ ಮಾಡಿದ ಶ್ರೀಗಳು, ಸರ್ಕಾರ ಮುಂದಾಗದೇ ಇದ್ದಾಗ, ಭಾವನೆಗಳ ಕಟ್ಟೆ ಹೊಡೆದಾಗ ಗಲಭೆಗಳು ಪ್ರಾರಂಭವಾಗುತ್ತದೆ. ಆಗ ಪರಿಹರಿಸಲು ಯಾರಿಗೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಇಂತಹ ವಿಷಯದಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸಿ ಸಮಸ್ಯೆ ಪರಿಹರಿಸುವುದು ಅಗತ್ಯವಿದೆ ಎಂದರು.


ಭಾರತ – ಪಾಕ್ ಕ್ರಿಕೆಟ್ ಪಂದ್ಯಾಟದ ಬಗ್ಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಕ್ರೀಡೆಯನ್ನು ಕ್ರೀಡೆಯನ್ನಾಗಿ ಸ್ವೀಕರಿಸಬೇಕು ಎನ್ನುವುದು ವಾಸ್ತವ. ಆದರೆ , ವಾಸ್ತವ ಎಲ್ಲವೂ ಸತ್ಯ ಆಗುತ್ತೋ ? ಎಂದು ಪ್ರಶ್ನಿಸಿದರು .
ಆ ದೇಶ ಕ್ರಿಕೆಟ್ ಅನ್ನು ಯಾವ ರೀತಿ ಸ್ವೀಕರಿಸಿದೆ ಎನ್ನುವುದು ಕೂಡ ಮುಖ್ಯ. ಇದೊಂದು ಯುದ್ಧ ಎಂದು ಆ ದೇಶ ಭಾವಿಸಿದಂತಿದೆ. ಇಂತಹ ಸ್ಥಿತಿಯಲ್ಲಿ ಆಟ ಆಡುವುದಕ್ಕೆ ಅರ್ಥವಿದೆಯೇ ಎಂದು ಅವರು ಕೇಳಿದ್ದಾರೆ

Join Whatsapp