ದರ್ಗಾ ನೆಲಸಮದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

Prasthutha|

ಉತ್ತರ ಪ್ರದೇಶದ ಗೋರಖಪುರ್ ಪ್ರದೇಶದಲ್ಲಿರುವ ಮುಬಾರಕ್ ಖಾನ್ ಶಹೀದರ ದರ್ಗಾಕ್ಕೆ ಸಂಬಂಧಪಟ್ಟ ಯಾವುದೇ ಕಟ್ಟಡವನ್ನು ನೆಲಸಮಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತಡೆಯಾಜ್ಞೆ ವಿಧಿಸಿದೆ. ಉತ್ತರ ಪ್ರದೇಶದ ಸಾರ್ವಜನಿಕ ಸ್ಥಳಗಳ ( ಅಕ್ರಮ ವಾಸ ತೆರವು) ಕಾಯ್ದೆ ಅನ್ವಯ ದರ್ಗಾ ಮತ್ತು ಅದಕ್ಕೆ ಸಂಬಂಧಪಟ್ಟ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಉತ್ತರ ಪ್ರದೇಶ ಸರಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಹಿಂಪಡೆಯುವಂತೆ ಕೋರಿ ವಕೀಲರಾದ ಶಾರಿಖ್ ಅಹ್ಮದ್ ಅಲಹಾಬಾದ್ ಹೈಕೋರ್ಟಿಗೆ ಅಪೀಲು ನೀಡಿದ್ದರೂ ಅದನ್ನು ನ್ಯಾಯಾಲಯ ತಳ್ಳಿ ಹಾಕಿತ್ತು ಎನ್ನಲಾಗಿದೆ. ಈ ತೀರ್ಪನ್ನು ಪ್ರಶ್ನಿಸಿ ಶಾರಿಖ್ ಅಹ್ಮದ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

- Advertisement -

ಮಾರ್ಚ್ 09ರಿಂದ ನೆಲಸಮಗೊಳಿಸುವ ಕಾರ್ಯಾಚರಣೆ ಆರಂಭಿಸುವಂತೆ ಗೋರಖ್ ಪುರ್ ಅಭಿವೃದ್ಧಿ ಪ್ರಾಧಿಕಾರ ಆದೇಶ ಹೊರಡಿಸಿದ್ದು, ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ಈಗ ತಡೆಯಾಜ್ಞೆ ವಿಧಿಸಿದೆ. ಸಂಬಂಧಿತ ದರ್ಗಾದಲ್ಲಿ ಮುಬಾರಕ್ ಖಾನ್ ಶಹೀದ್ ಅವರ ಸಮಾಧಿ ಮತ್ತು ಮಸೀದಿಯಿದ್ದು, ಪ್ರಾಚೀನ ಕಾಲದಿಂದಲೂ ಆರಾಧನಾ ಕಾರ್ಯ ನಡೆಯುತ್ತಿತ್ತು ಎಂದು ವಕೀಲರು ತನ್ನ ಅಪೀಲಿನಲ್ಲಿ ತಿಳಿಸಿದ್ದಾರೆ.

Join Whatsapp