ಕೃಷಿಕಾಯ್ದೆ ವಿರೋಧಿಸಿ ಬಿಜೆಪಿಗೆ ರಾಜೀನಾಮೆ ನೀಡಿದ ಮಾಜಿ ಶಾಸಕ ಸುಖ್ಪಾಲ್ ಸಿಂಗ್

Prasthutha|

ಪಂಜಾಬ್: ಕೇಂದ್ರ ಸರಕಾರ ಜಾರಿಗೆ ತಂದ ಕೃಷಿ ಕಾಯ್ದೆಯನ್ನು ವಿರೋಧಿಸಿ ಬಿಜೆಪಿ ಮಾಜಿ ಶಾಸಕ ಸುಖ್ಪಾಲ್ ಸಿಂಗ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

- Advertisement -


ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ಹಲವಾರು ಮಂದಿ ರೈತರು ಮೃತಪಟ್ಟಿರುವುದು ನನಗೆ ಮತ್ತು ನನ್ನ ಬೆಂಬಲಿಗರಿಗೆ ಅಸಮಾಧಾನ ತಂದಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚೆ ಏನಾದರೂ ನಿರ್ಧಾರ ಕೈಗೊಳ್ಳಬೇಕೆಂದು ನನ್ನ ಬೆಂಬಲಿಗರು ತಿಳಿಸಿದ್ದರು. ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.


“ನನ್ನ ಮನೆಯ ಮೇಲೆ ಬಿಜೆಪಿ ಧ್ವಜ ಯಾವಾಗಲೂ ಹಾರಾಡುತ್ತಿತ್ತು. ಆದರೆ ಈಗ ಭಾರವಾದ ಹೃದಯದಿಂದ ಅದನ್ನು ತೆಗೆದುಹಾಕಿ, ಕಪ್ಪು ಧ್ವಜ ಹಾರಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸದ ಕೇಂದ್ರ ಸರ್ಕಾರದ ವಿರುದ್ಧ ನನ್ನ ಸಿಟ್ಟು ತೋರಿಕೊಳ್ಳುತ್ತಿದ್ದೇನೆ”ಎಂದು ಸುಖ್ಪಾಲ್ ತಿಳಿಸಿದ್ದಾರೆ.
ಸಂಸದೀಯ ವ್ಯವಹಾರಗಳ ಮಾಜಿ ಕಾರ್ಯದರ್ಶಿಯೂ ಆಗಿದ್ದ ಸುಖ್ಪಾಲ್ ಸಿಂಗ್, ಫಿರೋಝ್ ಪುರದಲ್ಲಿ ಬಿಜೆಪಿಯಿಂದ ಚುನಾವಣೆಗೆ ಸ್ಫರ್ಧಿಸಿ ಎರಡು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.

Join Whatsapp