ನೆಹರು ಕುರಿತು ಸಿ.ಟಿ ರವಿ ಅವಹೇಳನಕಾರಿ ಹೇಳಿಕೆ: ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಖಂಡನೆ

Prasthutha|

ನವದೆಹಲಿ: ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಕುರಿತು ಅವಹೇಳನಕಾರಿ ಬಿಜೆಪಿ ನಾಯಕರ ಮಾತುಗಳು ರಾಜಕೀಯವಾಗಿ ತೀವ್ರ ಚರ್ಚೆ ಗೆ ಕಾರಣವಾಗಿದ್ದು, ನೆಹರು ಅವರ ಬಗೆಗಿನ ಹುಕ್ಕಾ ಸೇವನೆ ಕುರಿತು ಬಿಜೆಪಿ ನಾಯಕರು ನೀಡಿದ ಹೇಳಿಕೆಯನ್ನು ಬಿಜೆಪಿ ಪಕ್ಷದ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಖಂಡಿಸಿದ್ದಾರೆ.

- Advertisement -


ನೆಹರು, ವಾಜಪೇಯಿ ಅವರು ಪರಸ್ಪರ ಗೌರವಿಸಿಕೊಳ್ಳುತ್ತಿರುವ ನಾಯಕರು, ಅವರ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಿ.ಟಿ ರವಿ ಹೇಳಿಕೆಯನ್ನು ಪರೋಕ್ಷವಾಗಿ ಖಂಡಿಸಿದ್ದಾರೆ.
ನೆಹರು ಪ್ರಧಾನಿಯಾಗಿದ್ದ ಕಾಲಾವಧಿಯಲ್ಲಿ ವಾಜಪೇಯಿ ಸಂಸದರಾಗಿದ್ದರು, ಸಂಸತ್ತಿನಲ್ಲಿ ಮಾತನಾಡಲು ವಾಜಪೇಯಿ ಸ್ಪೀಕರ್ ಅವರಲ್ಲಿ ಮನವಿ ಮಾಡುತ್ತಿರುವುದನ್ನು ಕಂಡ ನೆಹರು ಅವರು ವಾಜಪೇಯಿ ಅವರಿಗೆ ಮಾತನಾಡಲು ಅವಕಾಶ ನೀಡಿ ಎಂದು ಲೋಕಸಭಾ ಅಧ್ಯಕ್ಷರ ಮೇಲೆ ಒತ್ತಡ ಹೇರುತ್ತಿದ್ದರು. ಅದೇ ರೀತಿ ವಾಜಪೇಯಿ ವಿದೇಶಾಂಗ ಸಚಿರಾಗಿದ್ದ ವೇಳೆ ಜವಹರಲಾಲ್ ನೆಹರು ಪೋಟೋವನ್ನು ತಮ್ಮ ಕಚೇರಿಯಲ್ಲಿ ತೆಗೆದು ಹಾಕಿದ್ದನ್ನು ಗಮನಿಸಿ ಕೂಡಲೇ ಅವರ ಪೋಟೋ ವನ್ನು ಇರಿಸುವಂತೆ ಆದೇಶಿಸಿದ್ದರು ಎಂದು ಅವರ ಸಂಬಂಧ ಕುರಿತು ಕುಮಾರಸ್ವಾಮಿ ನೆನಪಿಸಿಕೊಂಡಿದ್ದಾರೆ.


ಚೀನಾ ಭಾರತ ಯುದ್ಧದ ಸಂದರ್ಭದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ಅವರ ಈ ನಿರ್ಧಾರವನ್ನು ಅಟಲ್ ಬಿಹಾರಿ ವಾಜಪೇಯಿ ಬೆಂಬಲಿಸಿ ಇಂದಿರಾ ಗಾಂಧಿಯಂತೆ ಹೋರಾಡಿ ಎಂದು ಕರೆ ನೀಡಿ ಅವರನ್ನು ದುರ್ಗೆಗೆ ಹೋಲಿಸಿದ್ದರು. ಯುದ್ಧದ ಸಂದರ್ಭದಲ್ಲಿ ಪ್ರತಿಪಕ್ಷ ಆಡಳಿತ ಪಕ್ಷ ಒಂದೇ ಎಂದು ಹುರಿದುಂಬಿಸಿದ್ದರು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದ ಪ್ರಾರಂಭದಲ್ಲಿ ಇಂದಿರಾ ಗಾಂಧಿಜೀಯವರ ಬ್ಯಾಂಕ್ ರಾಷ್ಟ್ರೀಕರಣ ಕುರಿತು ಪ್ರಶಂಸೆ ವ್ಯಕ್ತಪಡಿಸಿ ಸಾಮಾನ್ಯ ಜನರಿಗೆ ಇದು ಅನುಕೂಲವಾಗಿದೆ ಎಂದು ಹೊಗಳಿದ್ದರು. ಈ ಹಿನ್ನೆಲೆಯಲ್ಲಿ ಯಾವುದೇ ಪಕ್ಷದ ನಾಯಕನನ್ನು ತಮ್ಮ ಸೈದ್ಧಾಂತಿಕ ಪ್ರತಿಪಾದನೆ ಅಥವಾ ನಾಯಕರ ಮೆಚ್ಚುಗೆಗಾಗಿ ಅವರನ್ನು ಅಗೌರವಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Join Whatsapp