ಹಾಡಹಗಲೇ ಶಸ್ತ್ರಸಜ್ಜಿತ ದರೋಡೆಕೋರರಿಂದ ಚಿನ್ನಾಭರಣ ಮಳಿಗೆಯಲ್ಲಿ ಗುಂಡು ಹಾರಾಟ, ಓರ್ವ ಸಾವು

Prasthutha|

ಮೈಸೂರು: ಚಿನ್ನಾಭರಣ ಮಳಿಗೆಯಲ್ಲಿ ದರೋಡೆಗೆ ಬಂದಿದ್ದ ಶಸ್ತ್ರ ಸಜ್ಜಿತ ದರೋಡೆಕೋರರ ತಂಡ ಹಾರಿಸಿದ ಗುಂಡಿಗೆ ಅಂಗಡಿಗೆ ಬಂದಿದ್ದ ಗ್ರಾಹಕರೊಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ಸೋಮವಾರ ನಡೆದಿದೆ.

- Advertisement -


ಚಂದ್ರು ಹತ್ಯೆಗೀಡಾದವರು. ಮೈಸೂರಿನ ವಿದ್ಯಾರಣ್ಯಪುರಂನ ಅಂಗಡಿಯೊಂದರಲ್ಲಿ ಚಿನ್ನ, ಬೆಳ್ಳಿ ಕದಿಯಲು ತಂಡವೊಂದು ಬಂದಿದೆ. ಈ ವೇಳೆ ಅಂಗಡಿ ಮಾಲೀಕನಿಗೆ ಗುಂಡು ಹಾರಿಸಿದ್ದು, ಈ ಗುಂಡು ಚಂದ್ರುವಿಗೆ ತಗುಲಿ ಮೃತಪಟ್ಟಿದ್ದಾನೆ. ತಕ್ಷಣ ತಂಡ ಚಿನ್ನಾಭರಣದೊಂದಿಗೆ ಪರಾರಿಯಾಗಿದೆ.


ಹಾಡಹಗಲೇ ಮೈಸೂರು ನಗರದಲ್ಲಿ ನಡೆದ ಈ ಘಟನೆಗೆ ಜನಬೆಚ್ಚಿಬಿದ್ದಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.



Join Whatsapp