ಗಾಝಾ ಪಟ್ಟಿಯ ಮೇಲಿನ ದಾಳಿ ಕಾನೂನಿನ ಸ್ಪಷ್ಟ ಉಲ್ಲಂಘನೆ: ಮಾನವ ಹಕ್ಕು ಒಕ್ಕೂಟ ಕಳವಳ

Prasthutha|

ಪಶ್ಚಿಮ ದಂಡೆ: ಇಸ್ರೇಲ್ ಸೈನ್ಯವು ಮೇ ತಿಂಗಳಲ್ಲಿ ವಾಯುದಾಳಿ ನಡೆಸಿ ಗಾಝಾ ಪಟ್ಟಿಯ ನಾಲ್ಕು ಕಟ್ಟಡವನ್ನು ನೆಲಸಮಗೊಳಿಸುವ ಮೂಲಕ ಅಂತಾರಾಷ್ಟ್ರೀಯ ಯುದ್ಧ ನಿಯಮವನ್ನು ಉಲ್ಲಂಘಿಸಿದೆಯೆಂದು ಪ್ರಮುಖ ಅಂತಾರಾಷ್ಟ್ರೀಯ ಮಾನವ ಹಕ್ಕಗಳ ಒಕ್ಕೂಟ ಸೋಮವಾರ ಕಳವಳ ವ್ಯಕ್ತಪಡಿಸಿದೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿರುವ ಹ್ಯೂಮನ್ ರೈಟ್ಸ್ ವಾಚ್ (ಎಚ್.ಆರ್.ಡಬ್ಲ್ಯೂ) ಈ ದಾಳಿಯಿಂದ ಯಾರಿಗೂ ಹಾನಿಯಾಗಿಲ್ಲ. ದಾಳಿಯಿಂದಾಗಿ ನೆರೆಯ ಕಟ್ಟಡಗಳು ಹಾನಿಗೊಳಗಾಗಿವೆ. ಮಾತ್ರವಲ್ಲದೆ ಡಝನ್ ಗಟ್ಟಲೆ ಜನರು ನಿರಾಶ್ರಿತರಾಗಿದ್ದಾರೆ ಮತ್ತು ತಮ್ಮ ವ್ಯಾಪಾರ – ವಹಿವಾಟನ್ನು ಕಳೆದುಕೊಂಡಿದ್ದಾರೆಂದು ಹೇಳಿದೆ. ಈ ದಾಳಿಯನ್ನು ಸಮರ್ಥಿಸುವ ಅಂಶಗಳನ್ನು ಇಸ್ರೇಲ್ ಬಹಿರಂಗಪಡಿಸಬೇಕೆಂದು ಎಚ್.ಆರ್.ಡಬ್ಲ್ಯೂ ಕೋರಿದೆ.

ಅಲ್-ಅಕ್ಸಾ ಮಸೀದಿ ಕಾಂಪೌಂಡ್ ಹಾಗೂ ಶೇಖ್ ಜರ್ರಾಹ್ ನಿಂದ ಇಸ್ರೇಲ್ ತನ್ನ ಪಡೆಗಳನ್ನು ಹಿಂದೆಗೆದುಕೊಳ್ಳುವಂತೆ ಹಮಾಸ್ ನೀಡಿದ ಗಡುವನ್ನು ಮೀರಿ ಇಸ್ರೇಲ್ ರಾಕೆಟ್ ಗಳನ್ನು ಹಾರಿಸಲಾಗಿತ್ತು. ಇಸ್ರೇಲ್ ನಡೆಸಿದ ಭೀಕರ ರಾಕೆಟ್ ದಾಳಿಯಿಂದಾಗಿ ಸಾಕಷ್ಟು ನಾಶನಷ್ಟವಾಗಿದೆ.

- Advertisement -

ಒಟ್ಟಾರೆಯಾಗಿ ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ ಕಳೆದ ಮೇ ತಿಂಗಳು ಗಾಝಾದ ಮೇಲೆ ದಾಳಿಯಲ್ಲಿ ಸುಮಾರು 260 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಕನಿಷ್ಠ 66 ಮಕ್ಕಳು ಮತ್ತು 41 ಮಹಿಳೆಯರು ಸೇರಿದ್ದಾರೆ. ಹಮಾಸ್ ತನ್ನ 80 ಹೋರಾಟಗಾರರ ಸಾವನ್ನು ಒಪ್ಪಿಕೊಂಡಿದೆ. ಈ ದಾಳಿಯಲ್ಲಿ ಒಬ್ಬ ಸೈನಿಕ, 2 ಮಕ್ಕಳು ಸೇರಿದಂತೆ 12 ಇಸ್ರೇಲ್ ನಾಗರಿಕರು ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ.

Join Whatsapp