ಶಿವಮೊಗ್ಗ | ಕಾರುಗಳ ನಡುವೆ ಡಿಕ್ಕಿ: ಅಪ್ಪ, ಮಗಳು ಮೃತ್ಯು

Prasthutha|

ಶಿವಮೊಗ್ಗ: ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಒಂದು ಕಾರಿನಲ್ಲಿದ್ದ ಅಪ್ಪ, ಮಗಳು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಜಾವಳ್ಳಿ ಬಳಿ ನಡೆದಿದೆ.

- Advertisement -


ಶಿವಮೊಗ್ಗದ ಟಿಪ್ಪುನಗರದ ಅಫ್ತಾಬ್(35), ಅಫ್ತಾಬ್ ತಂಗಿ ಮಗಳು ಮದಿಯಾ(12) ಮೃತರು.

ಇನ್ನುಳಿದಂತೆ ಕಾರಿನಲ್ಲಿದ್ದ 6 ಜನರಿಗೆ ಸಣ್ಣಪುಟ್ಟ ಗಾಯಗಳಾದರೆ, ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp