ಇಂಡಿಯಾ ಹೆಸರು ಹೇಗೆ ಬಂತು ಎಂದು ಮೊದಲು ಇತಿಹಾಸ ತಿಳಿದುಕೊಳ್ಳಲಿ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

Prasthutha|

ಬೆಂಗಳೂರು: ಇಂಡಿಯಾ ಹೆಸರು ಹೇಗೆ ಬಂತು ಎಂದು ಬೆಜೆಪಿಯವರು ಮೊದಲು ಇತಿಹಾಸ ತಿಳಿದುಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

- Advertisement -


ʻಇಂಡಿಯಾʼ ಹೆಸರು ಭಾರತ್ ಎಂದು ಬದಲಾವಣೆ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದೊಂದು ವಾಟ್ಸಪ್ ವಿವಿಯಲ್ಲಿ ಬೆಳೆದು ಬಂದಿದ್ದು. ಇವರು ಇತಿಹಾಸ ತಿಳಿದುಕೊಂಡು ಬಂದಿಲ್ಲ. ಇಂಡಿಯಾ ಹೇಗೆ ಬಂತು ಅಂತ ಮೊದಲು ಇವರು ಇತಿಹಾಸ ತಿಳಿದುಕೊಳ್ಳಲಿ ಅಂತ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿಯವರು ಮೊದಲು ರಸ್ತೆಗಳನ್ನ ಹೆಸರು ಚೇಂಜ್ ಮಾಡ್ತಿದ್ರು, ಈಗ ದೇಶದ ಹೆಸರು ಚೇಂಜ್ ಮಾಡ್ತಿದ್ದಾರೆ. ಮೊದಲು ದೇಶದ ಹಣೆಬರಹ ಚೇಂಜ್ ಮಾಡಿ. ಹಸಿವಿನಿಂದ ಎಷ್ಟು ಜನ ಸಾಯ್ತಿದ್ದಾರೆ? ಅದನ್ನ ಬದಲಾವಣೆ ಮಾಡಿ. ನಿಮ್ಮ ವರದಿಯಲ್ಲಿ ಕೋಟ್ಯಂತರ ಜನರು ಹಸಿವಿನಿಂದ ಸಾಯ್ತಿದ್ದಾರೆ. ಇದಕ್ಕೆ ಮೊದಲು ಪರಿಹಾರ ಕೊಡಿ ಅಂತ ಆಗ್ರಹಿಸಿದ್ದಾರೆ.

Join Whatsapp