ಶೇನ್ ವಾಟ್ಸನ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ | ವರದಿ

Prasthutha|

ಮುಂಬೈ : ಐಪಿಎಲ್ ನಲ್ಲಿ ಇದೇ ಮೊದಲ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಹಂತ ತಲುಪಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ, ತಾನು ಎಲ್ಲಾ ರೀತಿಯ ಕ್ರಿಕೆಟ್ ಗೆ ವಿದಾಯ ಹೇಳಲಿದ್ದೇನೆ ಎಂದು ಖ್ಯಾತ ಕ್ರಿಕೆಟಿಗ ಶೇನ್ ವಾಟ್ಸನ್ ಹೇಳಿರುವುದಾಗಿ ವರದಿಯೊಂದು ತಿಳಿಸಿದೆ.

ವಾಟ್ಸನ್ ತಮ್ಮ ತಂಡದ ಸಹ ಆಟಗಾರನ ಜೊತೆ ಈ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ. “ಕೊನೆಯ ಆಟದ ಬಳಿಕ ವಾಟ್ಸನ್ ತುಂಬಾ ಭಾವುಕರಾಗಿದ್ದರು ಮತ್ತು ಸಿಎಸ್ ಕೆ ಡ್ರೆಸ್ಸಿಂಗ್ ರೂಂ ನಲ್ಲಿ, ಕ್ರಿಕೆಟ್ ಗೆ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದರು’’ ಎಂದು ಮೂಲಗಳನ್ನು ಉಲ್ಲೇಖಿಸಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

- Advertisement -

ವಾಟ್ಸನ್ ಅ.29ರಂದು ಕೊನೆಯದಾಗಿ ಕೆಕೆಆರ್ ವಿರುದ್ಧ ಸಿಎಸ್ ಕೆ ಪರವಾಗಿ ಆಟ ಆಡಿದ್ದರು. ಐಪಿಎಲ್ ನ ಈ ಸೀಸನ್ ನಲ್ಲಿ 11 ಆಟಗಳನ್ನು ಆಡಿರುವ ವಾಟ್ಸನ್ ಎರದು ಅರ್ಧ ಶತಕಗಳೊಂದಿಗೆ 299 ರನ್ ಗಳನ್ನು ದಾಖಲಿಸಿದ್ದಾರೆ.

- Advertisement -