“ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್ ವಿರೋಧಿಸುವವರು…”: ಬಿಹಾರ ಚುನಾವಣೆಯಲ್ಲಿ ನರೇಂದ್ರ ಮೋದಿ

Prasthutha|

ಪಾಟ್ನಾ: ಬಿಹಾರದಲ್ಲಿ ಚುನಾವಣಾ ಪ್ರಚಾರ ಅಭಿಯಾನ ಆರಂಭವಾದ ಬಳಿಕ ನಾಲ್ಕನೆ ಬಾರಿ ರಾಜ್ಯಕ್ಕೆ ಭೇಟಿಯಿತ್ತಿರುವ ಪ್ರಧಾನಿ ನರೇಂದ್ರ ಮೋದಿ, ಬಿಹಾರ ಎನ್.ಡಿ.ಎಯನ್ನು ಮರುಚುನಾಯಿಸುವ ಸಿದ್ಧತೆಯಲ್ಲಿದೆ ಎಂದಿದ್ದಾರೆ. 243 ಸೀಟುಗಳ ರಾಜ್ಯ ವಿಧಾನ ಸಭೆಗೆ ನಡೆಯುತ್ತಿರುವ ಮೂರು ಹಂತಗಳ ಚುನಾವಣೆಯ ಎರಡನೆ ಹಂತದ ಮತದಾನದ ಮಧ್ಯೆ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.

“ಬಿಹಾರ ಸ್ಪಷ್ಟ ಸಂದೇಶವನ್ನು ನೀಡಿದೆ. ನಮಗೆ ದೊರಕುತ್ತಿರುವ ಆರಂಭಿಕ ಮಾಹಿತಿಯ ಪ್ರಕಾರ ಬಿಹಾರವು ಎನ್.ಡಿ.ಎ ಸರಕಾರವನ್ನು ಮರುಚುನಾಯಿಸುವ ಸಿದ್ಧತೆಯಲ್ಲಿದೆ. ಇಲ್ಲಿನ ಮತದಾರರು ರಾಜ್ಯವನ್ನುಒಂದು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ” ಎಂದು ಪ್ರಧಾನ ಮಂತ್ರಿಗಳು ಅರಾರಿಯಾದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.

- Advertisement -

ಆರ್.ಜೆ.ಡಿ ನೇತೃತ್ವದ ಗ್ರಾಂಡ್ ಅಲಯನ್ಸ್ ಅನ್ನು ಕುಟುಕುತ್ತಾ ಮೋದಿ, “ಬಿಹಾರಕ್ಕೆ ಜಂಗಲ್ ರಾಜ್ (ಆರ್.ಜೆ.ಡಿ)ಅನ್ನು ತಂದವರು ಯಾರು?…. ಅವರ ಸಹವರ್ತಿಗಳು…. ಅವರು ಏನನ್ನು ಬಯಸುತ್ತಾರೆ? ನೀವು ತಿಳಿದಿದ್ದೀರಾ? ನೀವು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಬಾರದೆಂದು ಅವರು ಬಯಸುತ್ತಾರೆ. ಛಾತಿ ದೇವತೆಯನ್ನು ಪೂಜಿಸುವ ಈ ಪುಣ್ಯ ಭೂಮಿಯಲ್ಲಿ ದೇಶಕ್ಕಾಗಿ ಜನರು ಘೋಷಣೆ ಕೂಗದಿರಲು ಸಾಧ್ಯವೇ?” ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿಯನ್ನು ಉಲ್ಲೇಖಿಸುತ್ತಾ, “ಒಂದು ಗುಂಪು ಹೇಳುತ್ತದೆ – ‘ಬಾರತ್ ಮಾತಾ ಕಿ ಜೈ’ ಎಂದು ಕೂಗಬೇಡಿ. ಇನ್ನೊಬ್ಬರು ಹೇಳುತ್ತಾರೆ ಅದು ಅವರಿಗೆ ತಲೆನೋವು ನೀಡುತ್ತದೆ. ಈಗ ಅವರು ಬಿಹಾರದ ಜನತೆಯೊಂದಿಗೆ ಮತ ಯಾಚಿಸುವುದಕ್ಕಾಗಿ ಒಟ್ಟು ಸೇರಿದ್ದಾರೆ. ನೀವು ‘ಜೈಶ್ರೀರಾಮ್’ ಕೂಗುವುದನ್ನು ಅವರು ಇಷ್ಟಪಡಲಾರರು” ಎಂದು ಮೋದಿ ಹೇಳಿದರು.

- Advertisement -