ದೆಹಲಿ ಗಲಭೆ ವೇಳೆ ಮುಸ್ಲಿಮ್ ಯುವಕನ ಹತ್ಯೆ: ಏಳು ಮಂದಿ ಆರೋಪಿಗಳ ವಿರುದ್ಧ ಆರೋಪ ಸಾಬೀತು

Prasthutha|

ನವದೆಹಲಿ, ಜು.4: ಕಳೆದ ವರ್ಷ ಈಶಾನ್ಯ ದೆಹಲಿಯ ಹಿಂಸಾಚಾರದ ವೇಳೆ ಸಿಹಿತಿಂಡಿ ತೆಗೆದುಕೊಂಡು ಮನೆಗೆ ಹೋಗುತ್ತಿದ್ದ ಮೊನೀಸ್ ಎಂಬ ಮುಸ್ಲಿಂ ಯುವಕನನ್ನು ಕೆಲವು ಹಿಂದುತ್ವವಾದಿ ಗುಂಪು ಸುತ್ತುವರಿದು ಹತ್ಯೆ ಮಾಡಿದ ಪ್ರಕರಣದ ಸಾಕ್ಷ್ಯಾಧಾರಗಳನ್ನು  ದೆಹಲಿ ಕೋರ್ಟು ಎತ್ತಿ ಹಿಡಿದಿದ್ದು, ಆರೋಪಿಗಳ ಮೇಲಿನ ಆಪಾದನೆ ಸಾಬೀತಾಗಿದೆ.

- Advertisement -

ಬಾರ್ ಮತ್ತು ಬೆಂಚ್ ವರದಿಯಂತೆ, ಆ ಏಳು ಮಂದಿ ಹಿಂದುತ್ವವಾದಿಗಳ ಮೇಲೆ ಕೊಲೆ ಮತ್ತು ಹಿಂಸಾಚಾರದ ಆರೋಪವನ್ನು ಕೋರ್ಟು ದೃಢೀಕರಿಸಿದೆ. ಹೆಚ್ಚುವರಿ ಸೆಶನ್ಸ್ ಜಡ್ಜ್ ವಿನೋದ್ ಯಾದವ್ ಅವರು, ಸಿಸಿಟೀವಿ ದೃಶ್ಯಾವಳಿಯಲ್ಲಿ ಆರೋಪಿಗಳು ಕಂಡುಬಂದಿಲ್ಲ. ಅದರೆ ಅವರ ವಿರುದ್ಧ ಸೂಕ್ತ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ದೆಹಲಿ ಗಲಭೆ ಸಂದರ್ಭದಲ್ಲಿ ಆರೋಪಿಗಳಾದ ಅಮನ್ ಕಶ್ಯಪ್, ಅರುಣ್ ಕುಮಾರ್, ಆಶೀಶ್, ದೇವೇಂದ್ರ ಕುಮಾರ್, ಪ್ರದೀಪ್ ರೈ, ಕ್ರಿಶನ್ ಕಾಂತ್ ದೈಮಾನ್, ರಾಹುಲ್ ಭಾರಧ್ವಾಜ್ ಎಂಬವರು 22 ವರ್ಷ ಪ್ರಾಯದ ಮೊನೀಸ್ ಎಂಬ ಯುವಕನನ್ನು ತಡೆದು ನಿಲ್ಲಿಸಿ ಸುಲಿಗೆ ಗೈದು ಹತ್ಯೆ ಮಾಡಿ ಪರಾರಿಯಾಗಿದ್ದರು.

- Advertisement -

ದಯಾಳಪುರದಲ್ಲಿ ಮೊನೀಸ್ ಮನೆಯತ್ತ ಹೋಗುತ್ತಿದ್ದಾಗ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಈ ಗುಂಪು ಆತನ ಮೇಲೆ ಕಲ್ಲು ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿತ್ತು. ಫೆಬ್ರವರಿ 25ರಂದು ಈ ಘಟನೆ ನಡೆದಿದ್ದು, ಪೊಲೀಸರು ಮೋನಿಸ್ ನನ್ನು ಆಸ್ಪತ್ರೆಗೆ ಒಯ್ದರಾದರೂ, ವೈದ್ಯರು ಅಷ್ಟರಲ್ಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಉತ್ತರ ಪ್ರದೇಶದ ಹರ್ದೋಯಿಯ 22ರ ಮೊನೀಸ್ ದಿನಗೂಲಿ ನೌಕರನಾಗಿದ್ದು, ಮುಸ್ತಫಾಬಾದ್ ಪ್ರದೇಶದಲ್ಲಿ ವಾಸಿಸುತ್ತಿದ್ದ.

ಅಪರಾಧಿಗಳ ಮೊಬೈಲ್ ಕಾಲ್ ರೆಕಾರ್ಡ್ ಗಳನ್ನು ಕೋರ್ಟು ಗಮನಿಸಿದ್ದು ಅವರು ಆ ಸಮಯದಲ್ಲಿ ಆ ಸ್ಥಳದಲ್ಲಿ ಹಾಜರಿದ್ದರು.

Join Whatsapp