ವಾಟ್ಸ್ ಆ್ಯಪ್ ನಲ್ಲಿ ಬಂತು ಹೊಸ ಫೀಚರ್: ಫೋಟೋ ಸೆಂಡ್ ಮಾಡುವಾಗ ತೋರಿಸುತ್ತೆ ಹೊಸ ಆಯ್ಕೆ

Prasthutha|

ಪ್ರಪಂಚದಲ್ಲಿ ಕೋಟ್ಯಂತರ ಮಂದಿ ಬಳಕೆದಾರರನ್ನು ಹೊಂದಿರುವ ಫೇಸ್​ ಬುಕ್ ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ ಆ್ಯಪ್ ಹೊಸ ಹೊಸ ಅಪ್ಡೇಟ್ ಅನ್ನು ನೀಡುತ್ತಲೇ ಇದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ನಾನಾ ಪ್ರಯೋಗ ನಡೆಸಿ ಹೊಸ ಆಯ್ಕೆಯನ್ನು ನೀಡುವ ವಾಟ್ಸ್​ ಆ್ಯಪ್ ಸದ್ಯ ತನ್ನ ಹೊಸ ಅಪ್ಡೇಟ್ ಪರಿಚಯಿಸಿದ್ದು ಬಳಕೆದಾರರಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಈ ಹೊಸ ಅಪ್ಡೇಟ್ ​ನಲ್ಲಿ ಬಳಕೆದಾರರು ತಮ್ಮ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಫೊಟೋ ಅಥವಾ ವಿಡಿಯೋವನ್ನು ಕಳುಹಿಸಿದಾಗ ಒಮ್ಮೆ ಮಾತ್ರ ಕಾಣಿಸುವಂತೆ ವಾಟ್ಸ್ ​ಆ್ಯಪ್​ ನಲ್ಲಿ ಆಯ್ಕೆ ಮಾಡಬಹುದಾಗಿದೆ.

- Advertisement -

ವಾಟ್ಸ್ ​ಆ್ಯಪ್ ಪರಿಚಯಿಸಿರುವ ಈ ಹೊಸ ಸಿಂಗಲ್ ವೀವಿಂಗ್ ಆಯ್ಕೆ ಅನೇಕರು ಮೆಚ್ಚಿಕೊಂಡಿದ್ದಾರೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ಉದಾಹರಣೆಗೆ ನೀವು ನಿಮ್ಮ ಸ್ನೇಹಿತರ ಚಾಟ್ ಬಾಕ್ಸ್ ಓಪನ್ ಮಾಡಿ ಫೋಟೋ ಅಥವಾ ವಿಡಿಯೋ ಕಳುಹಿಸ ಬೇಕಿದ್ದರೆ, ಐಕಾನ್ ಮೇಲೆ ಕ್ಲಿಕ್ ಮಾಡುತ್ತೀರಿ. ಆಗ ಫೋಟೊ ಅಥವಾ ವಿಡಿಯೋ ಸೆಲೆಕ್ಟ್ ಮಾಡಿ ಸೆಂಡ್ ಬಟನ್ ಪ್ರೆಸ್ ಮಾಡುವ ಪಕ್ಕದಲ್ಲೇ ವೀವ್ ಒನ್ಸ್ ಮೋಡ್ ಆಯ್ಕೆ ಇರುತ್ತದೆ. ಅದನ್ನು ಪ್ರೆಸ್ ಮಾಡಿ ಕಳುಹಿಸಿದರೆ, ನೀವು ಸೆಂಡ್ ಮಾಡಿದ ಫೈಲ್ ಅನ್ನು ಅವರಿಗೆ ಒಮ್ಮೆಗೆ ಮಾತ್ರ ಓಪನ್ ಮಾಡಲು ಸಾಧ್ಯವಾಗುತ್ತಿದೆ.

ಈ ಹೊಸ ಅಪ್ಡೇಟ್ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಾಟ್ಸ್​ಆ್ಯಪ್, ಈ ಆಯ್ಕೆಯನ್ನು ನಾವು ನೀಡಿರುವುದು ನ್ಯೂಡ್ ಫೋಟೋ ಕಳುಹಿಸಲು ಅಲ್ಲ, ಅಥವಾ ವೈಫೈ ಪಾಸ್​ವರ್ಡ್ ಯಾರಿಗೂ ತಿಳಿಯದಂತೆ ಹಂಚಿಕೊಳ್ಳಲು ಅಲ್ಲ. ಬದಲಾಗಿ ಒಳ್ಳೆಯ ಕಾರ್ಯಕ್ಕಾಗಿ, ಫೋಟೋ ಅಥವಾ ವಿಡಿಯೋವನ್ನು ಸ್ಕ್ರೀನ್ ​ಶಾಟ್ ತೆಗೆಯ ಬಾರದು ಎಂಬ ಕಾರಣಕ್ಕಾಗಿ ಎಂದು ಹೇಳಿದೆ.

- Advertisement -

ಈ ಮೂಲಕ ವಾಟ್ಸ್​ಆ್ಯಪ್ ತನ್ನ ಪ್ರೈವಸಿಯನ್ನು ಇನ್ನೂ ಒಂದು ಹೆಜ್ಜೆ ಮುಂದು ಇಟ್ಟಿದ್ದು. ಈ ಹೊಸ ಆಯ್ಕೆ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ನೀಡಲಾಗಿದೆ.

Join Whatsapp