ಉಳ್ಳಾಲದ ರಾಜೇಶ್ ಕೋಟ್ಯಾನ್ ಕೊಲೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ

Prasthutha|

ಮಂಗಳೂರು: ಉಳ್ಳಾಲ ಕೋಟೆಪುರದಲ್ಲಿ 2016ರ ಎ. 12ರ ಮುಂಜಾನೆ ನಡೆದಿದ್ದ ರಾಜೇಶ್‌ ಕೋಟ್ಯಾನ್‌ ಆಲಿಯಾಸ್‌ ರಾಜ (44) ಕೊಲೆ ಪ್ರಕರಣದಲ್ಲಿ ನಾಲ್ವರಿಗೆ ಜೀವಾವಾಧಿ ಶಿಕ್ಷೆ ನೀಡಲಾಗಿದೆ. ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌.ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

- Advertisement -

ಉಳ್ಳಾಲ ಕೋಡಿ ರೋಡ್‌ನ‌ ಮೊಹಮ್ಮದ್‌ ಆಸೀಫ್ ಆಲಿಯಾಸ್‌ ಆಚಿ (31), ಮುಕ್ಕಚೇರಿಯ ಮೊಹಮ್ಮದ್‌ ಸುಹೈಲ್‌ ಆಲಿಯಾಸ್‌ ಸುಹೈಲ್‌ (28), ಕೋಡಿ ಮಸೀದಿ ಬಳಿಯ ಅಬ್ದುಲ್‌ ಮುತಾಲಿಪ್‌ ಆಲಿಯಾಸ್‌ ಮುತ್ತು (28) ಮತ್ತು ಉಳ್ಳಾಲ ಉಳಿಯ ರಸ್ತೆಯ ಅಬ್ದುಲ್‌ ಅಸ್ವೀರ್‌ ಆಲಿಯಾಸ್‌ ಅಚ್ಚು (27) ಜೀವಾವಧಿ ಶಿಕ್ಷೆಗೊಳಗಾದವರು.

ಈ ಪ್ರಕರಣದಲ್ಲಿ ಇತರ ಇಬ್ಬರು ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕರಾಗಿದ್ದು, ಇವರ ವಿಚಾರಣೆ ಬಾಲ ನ್ಯಾಯ ಮಂಡಳಿಯಲ್ಲಿ ಬಾಕಿ ಇದೆ.

- Advertisement -

ನಾಲ್ವರು ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ ಕಲಂ 302ರಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ 25,000 ರೂ. ದಂಡ, ದಂಡ ಪಾವತಿಸಲು ವಿಫ‌ಲರಾದಲ್ಲಿ ಹೆಚ್ಚುವರಿ 1 ವರ್ಷ ಸಜೆ, ಕಲಂ 201ರಡಿಯಲ್ಲಿ 1 ವರ್ಷ ಸಜೆ ಮತ್ತು ತಲಾ 5,000 ರೂ. ದಂಡ, ದಂಡ ಪಾವತಿಸಲು ವಿಫ‌ಲವಾದರೆ ಹೆಚ್ಚುವರಿ 3 ತಿಂಗಳ ಸಾದಾ ಸಜೆ, ಕಲಂ 143ರಡಿ 6 ತಿಂಗಳ ಸಾದಾ ಸಜೆ, ಕಲಂ 148ರಡಿಯಲ್ಲಿ 1 ವರ್ಷ ಸಜೆ, ಕಲಂ 153(ಎ) ಅಡಿಯಲ್ಲಿ 1 ವರ್ಷ ಸಜೆ ವಿಧಿಸಲಾಗಿದೆ.

2016 ಎ. 12ರ ಮುಂಜಾವ ಕೋಟೆಪುರ ರಸ್ತೆಯಲ್ಲಿ ಮೀನುಗಾರಿಕೆ ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿದ್ದ ರಾಜೇಶ್‌ ಕೋಟ್ಯಾನ್‌ ಅವರ ಮೇಲೆ ಮರದ ದೊಣ್ಣೆಗಳಿಂದ ಹೊಡೆದು ಅನಂತರ ಅವರ ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಉಳ್ಳಾಲ ಠಾಣೆಯ ಪೊಲೀಸ್‌ ನಿರೀಕ್ಷಕ ಅಶೋಕ್‌ ಅವರು ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

Join Whatsapp