‘ಟೈಟಾನಿಕ್’ ಕ್ಯಾಪ್ಟನ್ ಖ್ಯಾತಿಯ ನಟ ಬರ್ನಾರ್ಡ್ ನಿಧನ

Prasthutha|

ಟೈಟಾನಿಕ್’, ‘ಲಾರ್ಡ್ ಆಫ್ ರಿಂಗ್ಸ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದ ಹಾಲಿವುಡ್ ನಟ ಬರ್ನಾರ್ಡ್ ಹಿಲ್ ಅವರು ನಿಧನ ಹೊಂದಿದ್ದಾರೆ.

- Advertisement -


ಅವರಿಗೆ 79 ವರ್ಷ ವಯಸ್ಸಾಗಿತ್ತು. 1997ರಲ್ಲಿ ರಿಲೀಸ್ ಆಗಿ ಆಸ್ಕರ್ ಗೆದ್ದ ‘ಟೈಟಾನಿಕ್’ ಸಿನಿಮಾದಲ್ಲಿ ಕ್ಯಾಪ್ಟನ್ ಎಡ್ವರ್ಡ್ ಸ್ಮಿತ್ ಪಾತ್ರ ಮಾಡಿದ್ದರು. ಅದೇ ರೀತಿ ‘ಲಾರ್ಡ್ ಆಫ್ ರಿಂಗ್ಸ್’ ಸಿನಿಮಾದಲ್ಲಿ ಕಿಂಗ್ ಥಿಯೋಡನ್ ಪಾತ್ರ ಮಾಡಿದ್ದರು.


ಕೇಟ್ ವಿನ್ಸ್ ಲೆಟ್ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಬರ್ನಾರ್ಡ್ ಈವರೆಗೂ ಸುಮಾರು 11 ಬಾರಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಾಲಿವುಡ್ ನಲ್ಲಿ ವಿವಿಧ ಪಾತ್ರಗಳನ್ನು ಮಾಡಿರುವ ಬೆರಳೆಣಿಕೆಯ ಕಲಾವಿದರಲ್ಲಿ ಇವರೂ ಒಬ್ಬರಾಗಿದ್ದಾರೆ.

Join Whatsapp