ಅಮೆರಿಕದ ನಾಸಾದ ಮುಂದಿನ ಚಂದ್ರಯಾನ ಯೋಜನೆಗೆ ಭಾರತ ಮೂಲದ ರಾಜಾ ಚಾರಿ ಆಯ್ಕೆ

Prasthutha|

ವಾಷಿಂಗ್ಟನ್ : ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಮುಂದಿನ ಚಂದ್ರಯಾನ ಯೋಜನೆಯಲ್ಲಿ ಭಾಗವಹಿಸಲಿರುವ 18 ಜನರ ಬಾಹ್ಯಾಕಾಶ ಯಾನಿಗಳಲ್ಲಿ ಭಾರತ ಮೂಲದ ಓರ್ವ ವಿಜ್ಞಾನಿ ಆಯ್ಕೆಯಾಗಿದ್ದಾರೆ. ಭಾರತ ಮೂಲದ ರಾಜಾ ಜಾನ್ ವುರ್ಪುತೂರ್ ಚಾರಿ ಚಂದ್ರಯಾನ ಕೈಗೊಳ್ಳಲಿರುವ ನಾಸಾ ತಂಡಕ್ಕೆ ಆಯ್ಕೆಯಾಗಿರುವ ಬಾಹ್ಯಾಕಾಶಯಾನಿಗಳಲ್ಲಿ ಒಬ್ಬರು.

- Advertisement -

2024ರಲ್ಲಿ ಚಂದ್ರನ ಮೇಲೆ ಮೊದಲ ಬಾರಿ ಮಹಿಳೆಯನ್ನು ಮೊದಲು ಇಳಿಸಲಾಗುತ್ತದೆ. ನಂತರ ಪುರುಷರು ಇಳಿಯುತ್ತಾರೆ. ಈ ದಶಕದ ಅಂತ್ಯಕ್ಕೆ ಚಂದ್ರನ ಮೇಲೆ ಮಾನವನ ಅಸ್ಥಿತತ್ವವನ್ನು ಸುಸ್ಥಿರಗೊಳಿಸುವ ಯೋಜನೆಯಿದೆ ಎಂದು ನಾಸಾ ಮೂಲಗಳು ತಿಳಿಸಿವೆ. ಚಂದ್ರನ ಮೇಲೆ ಪ್ರಯಾಣಿಸಲಿರುವ 18 ಬಾಹ್ಯಾಕಾಶಯಾನಿಗಳಲ್ಲಿ 9 ಪುರುಷರು, 9 ಮಹಿಳೆಯರು ಇರಲಿದ್ದಾರೆ.

43ರ ಹರೆಯದ ರಾಜಾಚಾರಿ ಭಾರತೀಯ ಮೂಲದ ಶ್ರೀನಿವಾಸ್ ವಿ. ಚಾರಿ ಮತ್ತು ಪೆಗ್ಗಿ ಎಲ್ಬರ್ಟ್ ದಂಪತಿಯ ಪುತ್ರನಾಗಿದ್ದು, ಸೆಡಾರ್ ಫಾಲ್ಸ್ ಲೊವಾದಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದ್ದಾರೆ. 1999ರಲ್ಲಿ ಅವರು ಅಮೆರಿಕ ವಾಯು ಸೇನಾ ಅಕಾಡೆಮಿಯಲ್ಲಿ ಆಸ್ಟ್ರೊನಾಟಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.   

Join Whatsapp