‘ಡ್ಯೂಟಿ ಮಾಡಿ, ಇಲ್ಲ ಮನೆಗೆ ಹೋಗಿ’ ಎಂದ ಅಧಿಕಾರಿಯ ಬೆದರಿಕೆಗೆ ಜಗ್ಗದ KSRTC ನೌಕರರು | ತೀವ್ರಗೊಂಡ ಬಸ್ ಸಿಬ್ಬಂದಿ ಮುಷ್ಕರ

Prasthutha|

ಹಾವೇರಿ : ಕೆಎಸ್ ಆರ್ ಟಿಸಿ ನೌಕರರ ಹೋರಾಟದ ವೇಳೆ ಹಾವೇರಿಯಲ್ಲಿ ವಾಯುವ್ಯ ಸಾರಿಗೆಯ ಡಿಸಿ ಬೆದರಿಕೆಗೂ ಜಗ್ಗದ ನೌಕರರು, ಪ್ರತಿಭಟನೆ ಮುಂದುವರಿಸಿದ್ದಾರೆ. ಡ್ಯೂಟಿ ಮಾಡಿ ಇಲ್ಲ ಮನೆಗೆ ಹೋಗಿ, ನಿಮ್ಮ ಮೇಲೆ ಕಂಪ್ಲೇಂಟ್ ಕೊಡ್ತೀನಿ ಎಂದು ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಪ್ರತಿಭಟನಕಾರರನ್ನು ಬೆದರಿಸಲು ಯತ್ನಿಸಿದ್ದಾರೆ.

- Advertisement -

ಬಸ್ ಚಲಾಯಿಸುವುದಿಲ್ಲ ಎಂದ ನೌಕರರ ಫೋಟೊ, ವೀಡಿಯೊ ಮಾಡಿಕೊಳ್ಳುವಂತೆ ಜಗದೀಶ್ ಸೂಚಿಸಿದಾಗ, ಫೋಟೊ ತೆಗೆದುಕೊಳ್ಳಿ ಎಂದು ನೌಕರರು ಮುಂದೆ ಬಂದರು ಎಂದು ವರದಿಯೊಂದು ತಿಳಿಸಿದೆ.

ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವಂತೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ಬಸ್ ಮುಷ್ಕರ ನಡೆಯುತ್ತಿದ್ದು, ಪ್ರತಿಭಟನೆಯ ಕಾವು ತೀವ್ರಗೊಂಡಿದೆ. ರಾಜ್ಯದಾದ್ಯಂತ ಕೆಎಸ್ ಆರ್ ಟಿಸಿ ಬಸ್ ಗಳಿಲ್ಲದೆ ಜನ ಪರದಾಡುವಂತಾಗಿದೆ.   

Join Whatsapp