ಪುತ್ತೂರು: ಪ್ರಚೋದನಕಾರಿ ಬ್ಯಾನರ್‌ಗಳ ವಿರುದ್ಧ ಪೊಲೀಸರ ಮೌನ ಸಮ್ಮತಿ ಅಪಾಯಕಾರಿ: SDPI

Prasthutha|

ಪುತ್ತೂರು: ಪ್ರಚೋದನಕಾರಿ ಬ್ಯಾನರ್ ಗಳ ವಿರುದ್ಧ ಪೊಲೀಸರ ಮೌನ ಸಮ್ಮತಿ ಅಪಾಯಕಾರಿ ಎಂದು SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪುತ್ತೂರು ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಅವರು ದೆಹಲಿಯಲ್ಲಿ ನಡೆದ ಕೊಲೆಯನ್ನು ಮುಂದಿಟ್ಟುಕೊಂಡು ಸಂಘಪರಿವಾರ ಸಂಘಟನೆಗಳು ಪರೋಕ್ಷವಾಗಿ ಅಲ್ಪಸಂಖ್ಯಾತ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಪುತ್ತೂರು ಪೇಟೆಯಲ್ಲಿ ಮತ್ತು ತಾಲೂಕಿನ ಹಲವೆಡೆ ಪ್ರಚೋದನಕಾರಿ ಬ್ಯಾನರ್ ಗಳನ್ನು ಹಾಕುವುದರ ಮೂಲಕ ಗಲಭೆ ನಡೆಸಲು ಷಡ್ಯಂತ್ರ ನಡೆಸುತ್ತಿದ್ದಾರೆ. ಪೋಲಿಸ್ ಇಲಾಖೆ ಇದನ್ನು ಕಂಡು ಕಾಣದಂತೆ ವರ್ತಿಸಿ ಮೌನ ಸಮ್ಮತಿ ನೀಡುತ್ತಿರುವ ಕ್ರಮವೂ ಖಂಡನೀಯವಾಗಿದೆ ಹಾಗೂ ಅದನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮುಸ್ಲಿಂ ನಾಮದಾರಿಯೊಬ್ಬ ನಡೆಸಿದ ಕೊಲೆಯನ್ನು ಯಾವುದೇ ಮುಸ್ಲಿಂ ಸಂಘಟನೆಗಳಾಗಲಿ ಅಥವಾ ವ್ಯಕ್ತಿಗಳಾಗಲಿ ಅದನ್ನು ಸಮರ್ಥಿಸಿಲ್ಲ ಬದಲಿಗೆ ಘಟನೆಯನ್ನು ಖಂಡಿಸಿ ಆರೋಪಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆ ಘಟನೆಯ ನಂತರ ಕೂಡ ಅಂತಹದೇ ಪ್ರಕರಣಗಳು ಇತರ ಸಮುದಾಯದ ನಾಮಧಾರಿಗಳಿಂದ ನಡೆದಿದೆ, ಇಂತಹ ಪೈಶಾಚಿಕ ಕೃತ್ಯಕ್ಕೆ ಧರ್ಮವಿಲ್ಲ ಎಂಬ ಅರಿವಿದ್ದರೂ ಕೂಡ ಒಂದು ಸಮುದಾಯದ ವಿರುದ್ಧ ದ್ವೇಷ ಸಾಧಿಸುವ ಮತ್ತು ಸಮಾಜದಲ್ಲಿ ಅಶಾಂತಿ ಹಬ್ಬಿಸುವ ಭಾಗವಾಗಿ ಈ ರೀತಿಯ ಬ್ಯಾನರ್ ಗಳನ್ನು ಸಂಘಪರಿವಾರ ಅಲ್ಲಲ್ಲಿ ಹಾಕುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಸಂಘಪರಿವಾರಕ್ಕೆ ಹಿಂದು ಹೆಣ್ಣು ಮಕ್ಕಳ ಅಷ್ಟೂ ಕಾಳಜಿ ಇದ್ದರೆ ಪುತ್ತೂರಿನವನೇ ಆದ ಸೈನೈಡ್ ಕಿಲ್ಲರ್ ಮೋಹನ್ ಕುಮಾರ್ ಎಂಬಾತ 20 ಕ್ಕೂ ಅಧಿಕ ಹಿಂದು ಹೆಣ್ಣು ಮಕ್ಕಳನ್ನು ಅತ್ಯಾಚಾರ ನಡೆಸಿ ಕೊಲೆ ನಡೆಸಿದ್ದಾನೆ, ಈ ಬಗ್ಗೆ ಯಾಕೆ ಇಷ್ಟರ ತನಕ ಸಂಘಪರಿವಾರ ಇಂತಹವರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ

ಹಿಂದು ಸಮಾಜ ಕೂಡ  ಅರ್ಥ ಮಾಡಿಕೊಂಡು ಪರಸ್ಪರ ದ್ವೇಷ ಸಾಧಿಸುವ ಸಂಘಪರಿವಾರದ ಹಿಡನ್ ಅಜೆಂಡಾವನ್ನು ಅರಿತು ಅವರನ್ನು ಬಹಿಷ್ಕರಿಸಿ ಶಾಂತಿ ಸೌಹಾರ್ದತೆ ನೆಲೆಗೊಳ್ಳಲು ಪಣತೊಡಬೇಕು.  ಹಾಗೂ ಪೋಲಿಸ್ ಇಲಾಖೆಯು ಕೂಡ ಪ್ರಚೋದನಕಾರಿ ಬ್ಯಾನರ್ ಹಾಕಿದವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಅದನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Join Whatsapp