ಪೊಲೀಸರಿಂದ ಸುಳ್ಯ SDPI ಕಛೇರಿಯಲ್ಲಿ ಸ್ಥಳ ಮಹಜರು ಎಂಬ ವರದಿ ಸತ್ಯಕ್ಕೆ ದೂರವಾದದ್ದು: ಅನ್ವರ್ ಸಾದತ್

Prasthutha|

ಮಂಗಳೂರು: ಇತ್ತೀಚೆಗೆ ಬೆಳ್ಳಾರೆಯಲ್ಲಿ ಕೊಲೆಗೀಡಾದ ಪ್ರವೀಣ್ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ತಮ್ಮ ವಶದಲ್ಲಿರುವ ವ್ಯಕ್ತಿಗಳೊಂದಿಗೆ ಸುಳ್ಯ ಹಾಗೂ ಬೆಳ್ಳಾರೆಯ SDPI ಕಛೇರಿಯಲ್ಲಿ ಸ್ಥಳ ಮಹಜರು ನಡೆಸಿದ್ದಾರೆ ಎಂಬ ಕೆಲವೊಂದು ಮಾಧ್ಯಮಗಳ ವರದಿಯು ಸತ್ಯಕ್ಕೆ ದೂರವಾದ ವರದಿಯಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

- Advertisement -

ಬೆಳ್ಳಾರೆ ಹಾಗೂ ಸುಳ್ಯದಲ್ಲಿ ಪಕ್ಷಕ್ಕೆ ಯಾವುದೇ ಕಛೇರಿ ಇರುವುದಿಲ್ಲ. ಕಛೇರಿಯೇ ಇಲ್ಲ ಅಂದಮೇಲೆ SDPI ಕಛೇರಿಯಲ್ಲಿ ಮಹಜರು ಮಾಡಲು ಹೇಗೆ ಸಾದ್ಯ. ಮಾಧ್ಯಮಗಳು ಇಂತಹ ವರದಿ ಮಾಡಿ ಯಾರನ್ನ ಮೂರ್ಖರನ್ನಾಗಿ ಮಾಡಲು ಹೊರಟಿದೆ ಎಂದು ಪ್ರಶ್ನಿಸಿದ್ದಾರೆ.

ಮಾಧ್ಯಮಗಳು ವರದಿ ಮಾಡುವಾಗ ಅದು ನಿಷ್ಪಕ್ಷಪಾತವಾಗಿ ಮಾಡಬೇಕು. ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿ ಅರಿತುಕೊಂಡು ವರ್ತಿಸಬೇಕು. ಟಿಆರ್ಪಿ, ಹಾಗೂ ಪ್ರಚಾರಕ್ಕಾಗಿ ಸುಳ್ಳು ಸುದ್ದಿಗಳನ್ನ ಹರಡಿ ಸಮಾಜದಲ್ಲಿ ಆತಂಕ ಮತ್ತು ಗೊಂದಲ ಉಂಟುಮಾಡುವ ಕೆಲಸಗಳು ಮಾಧ್ಯಮ ವ್ರತ್ತಿಗೆ ಶೋಭೆ ತರುವಂತಹ ಕೆಲಸವಲ್ಲ ಎಂಬ ವಿಚಾರವನ್ನು ಅರಿತುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ

Join Whatsapp