ಇಸ್ರೇಲ್ ಗುಂಡಿನ ದಾಳಿಗೆ ಫೆಲೆಸ್ತೀನ್ ಬಾಲಕ ಬಲಿ

Prasthutha|

ಗಾಝಾ: ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯ ನಬ್ಲಸ್ ನಗರದಲ್ಲಿ ಇಸ್ರೇಲ್ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಫೆಲೆಸ್ತೀನ್’ನ 16ರ ಹರೆಯದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಅಹ್ಮದ್ ಅಮ್ಜದ್ ಶೆಹದಾ ಎಂಬ ಬಾಲಕ ಇಸ್ರೇಲ್ ಪಡೆಗಳ ದಾಳಿಗೆ ಬಲಿಯಾಗಿದ್ದು, ಆತನ ಎದೆಗೆ ಗುಂಡು ಹಾರಿಸಿ ಹತ್ಯೆ ನಡೆಸಲಾಗಿದೆ ಎಂದು ಫೆಲೆಸ್ತೀನ್ ಅರೋಗ್ಯ ಸಚಿವಾಲಯ ತಿಳಿಸಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಘಟನೆಯಲ್ಲಿ ಇತರ ನಾಲ್ವರು ಫೆಲೆಸ್ತೀನಿಯರು ಗಾಯಗೊಂಡಿದ್ದು, ಒಬ್ಬರ ಹೊಟ್ಟೆಗೆ ಗುಂಡು ಹೊಕ್ಕಿರುವ ಪರಿಣಾಮ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ.

- Advertisement -

ಇದರೊಂದಿಗೆ ಇಸ್ರೇಲ್ ಪಡೆಯಿಂದ ಹತ್ಯೆಯಾದ 200ನೇ ಫೆಲೆಸ್ತೀನ್ ಮತ್ತು 51ನೇ ಅಪ್ರಾಪ್ತ ವಯಸ್ಕ ಅಹ್ಮದ್ ಅಮ್ಜದ್ ಶೆಹದಾ ಎಂದು ಇನ್ಸ್ಟಿ ಟ್ಯೂಟ್ ಆಫ್ ಮಿಡಲ್ ಈಸ್ಟ್ ಅಂಡರ್’ಸ್ಟ್ಯಾಂಡಿಂಗ್ ಟ್ವೀಟ್ ಮಾಡಿದೆ.

ಸುಮಾರು 5 ಲಕ್ಷ ಯಹೂದಿ ವಸಾಹತುಷಾಹಿಗಳು ಕಾನೂನು ಬಾಹಿರವಾಗಿ ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಸುಮಾರು 2.9 ಕೋಟಿ ಫೆಲೆಸ್ತೀನ್’ಯನ್ನರ ಜೊತೆಗೆ ಅಕ್ರಮವಾಗಿ ವಾಸಿಸುತ್ತಿದ್ದಾರೆ.

Join Whatsapp