‘ವಿಭಜನೆಯ ಬಳಿಕ ಸನಾತನ ಧರ್ಮದ ಅನುಯಾಯಿಗಳು ಮಾತ್ರ ಉಳಿಯಬೇಕಿತ್ತು’: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ

Prasthutha|

ಬೇಗುಸರಾಯ್: ವಿಭಜನೆಯ ಬಳಿಕ ದೇಶದಲ್ಲಿ ಸನಾತನ ಧರ್ಮದ ಅನುಯಾಯಿಗಳು ಮಾತ್ರ ಉಳಿಯಬೇಕಿತ್ತು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತಮ್ಮ ಲೋಕಸಭಾ ಕ್ಷೇತ್ರವಾದ ಬೇಗುಸರಾಯ್ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ದೇಶವನ್ನು ಧರ್ಮದ ಹೆಸರಿನಲ್ಲಿ ವಿಭಜಿಸಲಾಯಿತು. ಸನಾತನ ಧರ್ಮದಲ್ಲಿ ನಂಬಿಕೆ ಇರುವವರು ಮಾತ್ರ ಭಾರತದಲ್ಲಿ ಉಳಿದಿದ್ದರೆ ನಾವು ಬದ್ರುದ್ದೀನ್ ಅಜ್ಮಲ್ ಮತ್ತು ಅಸಾದುದ್ದೀನ್ ಓವೈಸಿಯಂತಹ ಜನರ ನಿಂದನೆಗಳನ್ನು ಸಹಿಸಬೇಕಾಗಿರಲಿಲ್ಲ” ಎಂದು ಹೇಳಿದ್ದಾರೆ.

- Advertisement -