ಶಿವಮೊಗ್ಗ: PFI, CFI ಹೆಸರಿನಲ್ಲಿ ಗೋಡೆ ಬರಹ: ದೂರು ದಾಖಲು

Prasthutha|

ಶಿವಮೊಗ್ಗ: ಸರ್ಕಾರದಿಂದ ನಿಷೇಧಿಸಲ್ಪಟ್ಟ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ( ಪಿಎಫ್ಐ) ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ಸೇರುವಂತೆ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಜಾಯಿನ್ ಪಿಎಫ್ಐ, ಸಿಎಫ್ ಐ ಎಂಬ ಗೋಡೆ ಬರಹ ಕಂಡು ಬಂದಿದೆ.

ಶಿರಾಳಕೊಪ್ಪದ ಹಳೆ ಪೆಟ್ರೋಲ್ ಬಂಕ್ ಪಕ್ಕದ ಸಿಮೆಂಟ್ ಕಾಂಪೌಂಡ್, ಬೋವಿ ಕಾಲೋನಿಗೆ ಹೋಗುವ ವಿದ್ಯುತ್ ಕಂಬ, ದೊಡ್ಡ ಬ್ಯಾಣದಕೇರಿಗೆ ಹೋಗುವ ಕ್ರಾಸ್ ಬಳಿ ಗೋಡೆ ಮತ್ತು ವಿದ್ಯುತ್ ಕಂಬ ಸೇರಿ 9ಕ್ಕೂ ಹೆಚ್ಚು ಕಡೆ ಈ ರೀತಿಯ ಬರಹಗಳು ಗೋಚರಿಸಿವೆ ಎನ್ನಲಾಗಿದೆ.

- Advertisement -


ಈ ಸಂಬಂಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.


- Advertisement -