ಸರ್ವಾಧಿಕಾರದ ನಡೆಗೆ ಪ್ರತಿರೋಧ ಉಂಟಾಗಬಾರದೆಂದು PFI ಅನ್ನು ಬ್ಯಾನ್ ಮಾಡಿದ್ದಾರೆ: ಪ್ರೊ.ಹರಿರಾಮ್

Prasthutha|

►PFI ಮೇಲಿನ ದಾಳಿ ಮತ್ತು ನಿಷೇಧ ಖಂಡಿಸಿದ ಆಲ್ ಇಂಡಿಯಾ ಲಾಯರ್ಸ್ ಕೌನ್ಸಿಲ್

- Advertisement -

ಬೆಂಗಳೂರು: ಸಾಮಾಜಿಕ ಸಂಘಟನೆಯಾಗಿ ಗುರುತಿಸಿಕೊಂಡು, ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ PFI ಮೇಲಿನ ದಾಳಿ ಮತ್ತು ನಿಷೇಧ ಇವೆರಡೂ ರಾಜಕೀಯ ಪ್ರೇರಿತವಾಗಿದೆ ಎಂದು ಅಲ್ ಇಂಡಿಯಾ ಲಾಯರ್ಸ್ ಕೌನ್ಸಿಲ್ (AILC) ರಾಜ್ಯಾಧ್ಯಕ್ಷರಾದ ಪ್ರೊ.ಹರಿರಾಮ್ ಆರೋಪಿಸಿದ್ದಾರೆ.

ಕೇಂದ್ರ ಬಿಜೆಪಿ ಸರಕಾರವು ತನಿಖಾ ಸಂಸ್ಥೆಗಳನ್ನು ಮನಬಂದಂತೆ ಬಳಕೆ ಮಾಡಿ, ಕೀಳು ರಾಜಕೀಯ ಮಾಡುತ್ತಿದೆ ಮತ್ತು ಸ್ಥಳೀಯ ಕಾರ್ಯಕರ್ತರನ್ನು ಆಧಾರ ರಹಿತ ಪ್ರಕರಣದಲ್ಲಿ ಸಿಲುಕಿಸಿ ಕಿರುಕುಳ ನೀಡುತ್ತಿರುವುದು ಕಾನೂನು ವಿರೋಧಿ ಕೃತ್ಯ. ಸುಳ್ಳಾರೋಪಗಳನ್ನು ಹೊರಿಸಿ ದಾಳಿ ನಡೆಸಿದ NIAಯು PFI ಸಂಘಟನೆಯ ಹಲವು ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಿ ಸಂಘಟನೆಯನ್ನು ನಿಷೇದಿಸಿದ್ದು ಸಂವಿಧಾನದ ಕಗ್ಗೊಲೆಯಾಗಿದೆ ಎಂದು ಹರಿರಾಮ್ ಹೇಳಿದರು.

- Advertisement -

PFI ಸಂಘಟನೆಯು ಸಮಾಜದಲ್ಲಿ ನ್ಯಾಯ ನಿರಾಕರಿಸಲ್ಪಟ್ಟ,ಅಧಿಕಾರರಹಿತ,ವ್ಯವಸ್ಥಿತವಾಗಿ ತುಳಿಯಲ್ಪಟ್ಟವರ ಪರನಿಂತು ಅವರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿತ್ತು ಮತ್ತು RSS ಸಂಘಪರಿವಾರದ ಸಿದ್ದಾಂತದ ವಿರುದ್ಧ ರಾಜಿರಹಿತ ಹೋರಾಟ ಮಾಡುತ್ತಿತ್ತು. ಇದನ್ನು ಸಹಿಸದೆ PFIಯ ಧ್ವನಿಯಡಗಿಸಿ, ಸರ್ಕಾರವು ತಾನು ಮಾಡಲಿಚ್ಚಿಸಿದ ಅಕ್ರಮ ಅನ್ಯಾಯಗಳಿಗೆ ಯಾವುದೇ ರೀತಿಯ ಪ್ರತಿರೋಧ ವ್ಯಕ್ತವಾಗಬಾರದೆಂಬ ದುರುದ್ದೇಶದಿಂದ ಸುಳ್ಳಾರೋಪಗಳನ್ನು ಹೊರಿಸಿದೆ ಎಂದು ಟೀಕಿಸಿದರು.

RSSನ ಕೈಗೊಂಬೆಯಾಗಿರುವ ಮೋದಿ ನೇತೃತ್ವದ ಒಕ್ಕೂಟ ಸರ್ಕಾರದ ಇಂತಹಾ ದುರುದ್ದೇಶಪೂರಿತ ನಡೆಯು ಆಡಳಿತವನ್ನು ಸರ್ವಾಧಿಕಾರದ ಕಡೆಗೆ ವೇಗವಾಗಿ ಸಾಗಿಸುತ್ತಿದೆ . RSS, BJP ಯು ತನ್ನ ಅಧಿಕಾರವನ್ನು ಬಳಸಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸುತ್ತಿರುವುದು ಕೀಳು ರಾಜಕೀಯವಾಗಿದೆ. ಇದನ್ನು ಆಲ್ ಇಂಡಿಯಾ ಲಾಯರ್ಸ್ ಕೌನ್ಸಿಲ್ ( AILC) ತೀವ್ರವಾಗಿ ಖಂಡಿಸುತ್ತದೆ ಎಂದು ಹರಿರಾಮ್ ತಿಳಿಸಿದರು.