ಟಿ20| ಎಂ.ಎಸ್‌. ಧೋನಿ ದಾಖಲೆ ಮುರಿದ ರೋಹಿತ್‌ ಶರ್ಮಾ

Prasthutha|

ತಿರುವನಂತಪುರಂ: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ, ಭಾನುವಾರ ಗುವಹಾಟಟಿಯಲ್ಲಿ ನಡೆಯಲಿದೆ. ತಿರುವನಂತಪುರಂನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ 8 ವಿಕೆಟ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು.

- Advertisement -

ಈ ಗೆಲುವಿನೊಂದಿಗೆ ರೋಹಿತ್‌ ಶರ್ಮಾ, ಟೀಮ್‌ ಇಂಡಿಯಾದ ಯಶಸ್ವಿ ನಾಯಕ ಎಂ ಎಸ್ ಧೋನಿ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕ್ಯಾಲೆಂಡರ್ ವರ್ಷವೊಂದರಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿಹೆಚ್ಚು ಗೆಲುವು ದಾಖಲಿಸಿದ ಭಾರತದ ಪುರುಷರ ತಂಡದ ನಾಯಕ ಎನ್ನುವ ದಾಖಲೆ ಇದೀಗ ರೋಹಿತ್ ಶರ್ಮಾ ಪಾಲಾಗಿದೆ.

ಪ್ರಸಕ್ತ ವರ್ಷ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಂ ಇಂಡಿಯಾ ಇದುವರೆಗೂ ಒಟ್ಟು 16 ಪಂದ್ಯಗಳಲಿ ಜಯಭೇರಿ ಬಾರಿಸಿದೆ. ಇದಕ್ಕೂ ಮೊದಲು 2016ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ 15 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಇದೀಗ ಆ ದಾಖಲೆಯನ್ನು ಹಿಟ್‌ಮ್ಯಾನ್ ರೋಹಿತ್ ಶರ್ಮಾ ತಮ್ಮದಾಗಿಸಿಕೊಂಡಿದ್ದಾರೆ.

- Advertisement -

ತಾಯ್ನೆಲದಲ್ಲಿ 11 ಸೇರಿದಂತೆ ಇದುವರೆಗೂ 140 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ರೋಹಿತ್‌ ಒಟ್ಟು 3694 ರನ್‌ಗಳಿಸಿದ್ದು, ಟಾಪ್‌ ಸ್ಕೋರರ್‌ ಎನಿಸಿದ್ದಾರೆ. 3660 ರನ್‌ಗಳಿಸಿರುವ ವಿರಾಟ್ ಕೊಹ್ಲಿ ಎರಡನೇ ಹಾಗೂ ಮಾರ್ಟಿನ್ ಗಪ್ಟಿಲ್ 3497 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಕಳೆದ ಐದು ಪಂದ್ಯಗಳಲ್ಲಿ ರೋಹಿತ್‌ ಶರ್ಮಾ ಕ್ರಮವಾಗಿ 0, 17, 46, 11 ಹಾಗೂ 72 ರನ್‌ಗಳಿಸಿದ್ದಾರೆ.

Join Whatsapp