ಮಹಿಳೆಗೆ 24 ಲಕ್ಷದ ಮನೆ ಕಟ್ಟಿಸಿಕೊಟ್ಟ ಮೋದಿ । ಇಂಟರ್ನೆಟ್ ವೈರಲ್ ಚಿತ್ರದ ಸತ್ಯಾಸತ್ಯತೆಯೇನು ?

Prasthutha|

‘ಪ್ರಸ್ತುತ’ ವಿಶೇಷ ವರದಿ

- Advertisement -

ಪಶ್ಚಿಮ ಬಂಗಾಳದ ಮಹಿಳೆಯೊಬ್ಬರಿಗೆ ಪ್ರಧಾನಿ ಮೋದಿ 24 ಲಕ್ಷ ರೂಪಾಯಿಗಳ ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆಂದು ತಿಳಿಸುವ ಪತ್ರಿಕೆಯನ್ನು ಹಿಡಿದುಕೊಂಡ ಪತ್ರಕರ್ತ ಕನ್ಹಯ್ಯಾ ಭೇಲಾರಿ ಅವರು ಓರ್ವ ಮಹಿಳೆಯೊಂದಿಗಿರುವ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.  ವಾಸ್ತವದಲ್ಲಿ ಅದು ಮೋದಿ 24 ಲಕ್ಷ ರೂಪಾಯಿಗಳ ಮನೆ ನಿರ್ಮಿಸಿ ಕೊಟ್ಟ ಜಾಹೀರಾತು ಅಲ್ಲದಿದ್ದರೂ, ಬಿಜೆಪಿಗರು ಚುನಾವಣೆ ಗೆಲ್ಲಲು ಬಳಸುವ ವಾಮಮಾರ್ಗಗಳು ಮತ್ತೊಮ್ಮೆ ಜನತೆಯ ಮುಂದೆ ಜಗಜ್ಜಾಹೀರಾಗಿದೆ. ಆ ಮೂಲಕ ಬಿಜೆಪಿಗರ ಸುಳ್ಳು ಪ್ರಚಾರಗಳು ಬಟಾಬಯಲಾಗಿದೆ.

ಬಿಜೆಪಿ ಪಶ್ಚಿಮ ಬಂಗಾಳದ ಚುನಾವಣೆಯನ್ನು ಗೆಲ್ಲಲು ಹರಸಾಹಸ ಪಡುತ್ತಿದೆ.  ದೀದಿಯನ್ನು ಹಣಿಯಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿದೆ. ಈ ಸುದ್ದಿ ಚಿತ್ರದ ವಾಸ್ತವವೇನೆಂದರೆ ಕೇಂದ್ರ ಸರಕಾರದ ಹಣಕಾಸು ನೆರವಿನ ಮೂಲಕ ಬಂಗಾಳದಲ್ಲಿ ಬಡವರಿಗೆ 24,00,000 ಮನೆಗಳನ್ನು ನಿರ್ಮಿಸಲು ಸಾಲ ನೀಡಿದೆ ಎಂದು ಜನರಿಗೆ ತೋರಿಸುವ ಪತ್ರಿಕಾ ಜಾಹೀರಾತಾಗಿತ್ತು ಅದು. ಆ ಜಾಹೀರಾತಿನಲ್ಲಿದ್ದ ಮಹಿಳೆಯನ್ನು ಹುಡುಕಿಕೊಂಡು ಹೋದ ಪತ್ರಕರ್ತ ಕನ್ಹಯ್ಯಾ ಭೇಲಾರಿಗೆ ಅಚ್ಚರಿ ಕಾದಿತ್ತು. ಆ ಮಹಿಳೆ ಇನ್ನೂ ವಾಸಿಸುತ್ತಿರುವುದು ಸ್ಲಂ ಪ್ರದೇಶದಲ್ಲಾಗಿತ್ತು. ಜನರಿಗೆ ಬಿಜೆಪಿಯ ಅಸಲಿಯತ್ತು ತಿಳಿಸುವ ಉದ್ದೇಶದಿಂದ ಅವರು ನಂತರ ಆ ಮಹಿಳೆಯ ಜೊತೆಗೆ ನಿಂತು ಫೋಟೋ ತೆಗೆದು ಅದನ್ನು ಹಂಚಿದ್ದಾರೆ. ಅದು ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಬಿಜೆಪಿಯು ತನ್ನ ಶೈಲಿಯ ಪ್ರಕಾರ ಮತದಾರರನ್ನು ಆಕರ್ಷಿಸಲು ಪತ್ರಿಕೆ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಪ್ರಚಾರ ಸಾಧನಗಳಾಗಿ ಬಳಸಿಕೊಂಡಿದೆ. ಆದರೆ, ಪತ್ರಿಕೆಯೊಂದರಲ್ಲಿ ಪ್ರಕಟವಾದ ಜಾಹೀರಾತು ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಬಡವರಿಗೆ ಸುಮಾರು 24 ಲಕ್ಷ ಮನೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಸಾಲ ನೀಡಿದೆ ಎಂದು ಸೋಮವಾರ ಬಿಜೆಪಿ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿತ್ತು. ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತಿನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಮಹಿಳೆಯ ಚಿತ್ರವಿದ್ದು, ಮಹಿಳೆಯನ್ನು ಪಶ್ಚಿಮ ಬಂಗಾಳದ ವಸತಿ ಯೋಜನೆಯ ಫಲಾನುಭವಿ ಎಂದು ಬಿಂಬಿಸಲಾಗಿತ್ತು. ಆ ಮಹಿಳೆಯನ್ನು ಹುಡುಕಿ ಹೊರಟ ಕನ್ಹಯ್ಯ ಭೆಲಾರಿ ಎಂಬ ಪತ್ರಕರ್ತರೊಬ್ಬರು ವಾಸ್ತವವನ್ನು ದೇಶದ ಮುಂದೆ ಬಿಚ್ಚಿಟ್ಟಿದ್ದಾರೆ,  ಆ ಮಹಿಳೆ ಇಂದಿಗೂ ಜೀವಿಸುತ್ತಿರುವುದು ಸ್ಲಂ ಪ್ರದೇಶವೊಂದರ ಒಂದು ಕೋಣೆಯ ಹುಲ್ಲು ಹಾಸಿದ ಗುಡಿಸಲಿನಲ್ಲಿ ಎಂದು ತಿಳಿದು ಬಂದಿದೆ. ಮೋದಿಯ ಫೋಟೋದ ಪಕ್ಕದಲ್ಲಿದ್ದ ಮಹಿಳೆಯನ್ನು ಪತ್ರಕರ್ತ ಭೇಟಿಯಾಗಿ ಪತ್ರಿಕೆಯಲ್ಲಿ ಬಂದ ಕೇಂದ್ರ ಸರ್ಕಾರದ ಜಾಹೀರಾತನ್ನು ತೋರಿಸುವ ಫೋಟೋ ಕೂಡಾ ಇಂಟರ್ನೆಟ್ ನಲ್ಲಿ ವೈರಲಾಗುತ್ತಿದೆ. ನೆಟ್ಟಿಗರು ಬಿಜೆಪಿಗರ ಕಾರ್ಯವನ್ನು ಭಾರೀ ಟ್ರೋಲ್ ಮಾಡುತ್ತಿದ್ದಾರೆ.

Join Whatsapp