ಮ್ಯಾನ್ಮಾರ್: ಮ್ಯಾನ್ಮಾರ್’ನ ಮಾಜಿ ಪ್ರಧಾನಿ ಆಂಗ್ ಸಾನ್ ಸೂಕಿ ಅವರಿಗೆ ಭ್ರಷ್ಟಾಚಾರದಲ್ಲಿ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಿದ ಸೇನಾ ನ್ಯಾಯಾಲಯ, ಆರು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಈ ಹಿಂದೆ ಅವರು 11 ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಲಾಗಿದ್ದು, ಇದರ ಹೊರತಾಗಿ ಮತ್ತೆ 6 ವರ್ಷಗಳ ಕಾಲ ಜೈಲು ಸಜೆ ಸೇರ್ಪಡೆಗೊಂಡಿದೆ.
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದ್ದು, ಗೌಪ್ಯವಾಗಿ ನಡೆದ ವಿಚಾರಣೆಯ ಬಳಿಕ ಸೋಮವಾರ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ಅಲ್ಲದೆ ಹಗರಣವೊಂದಕ್ಕೆ ತಲಾ 3 ವರ್ಷಗಳ ಜೈಲು ಶಿಕ್ಷೆ ನೀಡಲಾಗಿದೆ. ಮೂರು ಶಿಕ್ಷೆಯನ್ನು ಒಂದಾಗಿ ಅನುಭವಿಸಲು ಅವಕಾಶ ನೀಡಿದ ಪರಿಣಾಮ ಒಟ್ಟಾರೆಯಾಗಿ ಆರು ವರ್ಷ ಜೈಲು ಶಿಕ್ಷೆ ನೀಡಲಾಗಿದೆ ಎಂದು ಹಿರಿಯ ಕಾನೂನು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.