ಮುಂಬೈ: ಖಡ್ಗದಿಂದ ಬರ್ತ್ ಡೇ ಕೇಕ್ ಕತ್ತರಿಸಿದ 17 ವರ್ಷದ ಯುವಕನ ವಿರುದ್ಧ ಪ್ರಕರಣ ದಾಖಲು

Prasthutha|

ಮುಂಬೈ: 21 ಕೇಕ್ ಗಳನ್ನು ಖಡ್ಗದಿಂದ ಕತ್ತರಿಸುವ ಮೂಲಕ 17 ವರ್ಷದ ಯುವಕನೊಬ್ಬ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಬರ್ತ್ ಡೇ ಭಾಯ್ ಗೆ ಸಂಕಷ್ಟ ಎದುರಾಗಿದೆ. ಪೊಲೀಸರು ಯುವಕನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದಾರೆ.

- Advertisement -

ಮುಂಬೈನ ಬೊರಿವಲಿ ಪ್ರದೇಶದಲ್ಲಿ ಯುವಕ ಶುಕ್ರವಾರ ರಾತ್ರಿ ತನ್ನ ಸ್ನೇಹಿತರೊಂದಿಗೆ ಖಡ್ಗದಿಂದ ಕೇಕ್ ಕತ್ತರಿಸುವ ಮೂಲಕ ತನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

ಮುಂಬೈ ಪೊಲೀಸರ ಟ್ವಿಟರ್ ಗೆ  ಬರಹಗಾರರೊಬ್ಬರು ವೀಡಿಯೊವನ್ನು ಟ್ಯಾಗ್ ಮಾಡಿದ ನಂತರ ಪ್ರಕರಣ ದಾಖಲಿಸಲಾಗಿದೆ. ಯುವಕ ತಲೆಮರೆಸಿಕೊಂಡಿದ್ದು, ಆತನಿಗಾಗಿ ಇನ್ನೂ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp