ಬಣಕಲ್‍ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ

Prasthutha|

ಚಿಕ್ಕಮಗಳೂರು: ಬಣಕಲ್ ಪ್ರೌಢಶಾಲೆಯ ಅಟಲ್ ಟಿಂಕರ್ ಲ್ಯಾಬ್ ನಲ್ಲಿ ಆಯೋಜಿಸಿದ್ದ ವೈಜ್ಞಾನಿಕ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎ.ಜಯರಾಮಗೌಡ ಉದ್ಘಾಟಿಸಿದರು.

- Advertisement -

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಬರೀ ಪಠ್ಯ ಪುಸ್ತಕಗಳೇ ಜೀವಾಳವಾಗದೇ ಪಠ್ಯೇತರ ಚಟುವಟಿಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಬುದ್ದಿ ಶಕ್ತಿ ಹೆಚ್ಚಿಕೆಯಾಗುತ್ತದೆ. ಪ್ರತಿಭೆ ಬೆಳಗಿಸುವುದಕ್ಕೆ ಇಂತಹ ವೈಜ್ಞಾನಿಕ  ಚಟುವಟಿಕೆ ಸಹಕಾರಿಯಾಗಿದೆ. ಮಕ್ಕಳಿಗೆ ರಚನಾತ್ಮಕ ಹಾಗೂ ಕ್ರಿಯಾತ್ಮಕ ಮನೋಭಾವ ಬೆಳೆಸಿ ದೇಶಕ್ಕೆ ಯುವ  ವಿಜ್ಞಾನಿಗಳನ್ನಾಗಿ ಮಾರ್ಪಡಿಸುವ ಅಗತ್ಯವಿದೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕೂಡ ಸರ್ಕಾರಿ ಶಾಲೆಗಳಲ್ಲಿ ಓದಿ ವಿಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಅಪಾರ  ಕೊಡುಗೆ ನೀಡಿದರು. ಇಂತಹ ಚಟುವಟಿಕೆಗಳು ಪ್ರತಿಯೊಂದು ಶಾಲೆಯಲ್ಲೂ ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಶಾಲಾ ವಿಜ್ಞಾನ ಶಿಕ್ಷಕರಾದ ವಲ್ಸಮ್ಮ ಪೌಲ್ಸನ್ ಹಾಗೂ ಅಪೂರ್ವ ಸಹಕಾರದೊಂದಿಗೆ ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜಿಸಿದ್ದರು.ಮಕ್ಕಳು ತಾವು ತಯಾರಿಸಿದ ವೈಜ್ಞಾನಿಕ ವಸ್ತುಗಳ ವಿವರಣೆಯನ್ನು ನೀಡಿ ಅದರ ಕಾರ್ಯ ವೈಖರಿ ಬಗ್ಗೆ ತಿಳಿಸಿಕೊಟ್ಟರು. ಶಿಕ್ಷಕರಾದ ಪಿ.ವಾಸುದೇವ್, ಸಹಶಿಕ್ಷಕರಾದ ಜಿ.ಎಚ್.ಶ್ರೀನಿವಾಸ್, ಎ.ಎನ್.ಪ್ರತೀಕ್,ಅಕ್ರಂ ಪಾಷಾ,ಪ್ರವೀಣ್, ಉಮಾಮಹೇಶ್ ,ಚೈತ್ರಾ ರೋಹಿತ್,ಲಲಿತ, ಬೋರಕ್ಕ,ಸುಪ್ರೀಯ ಡಿಕುನ್ನ,ಮುಭಾಸೀರ,ಸೌಮ್ಯ,ದಿವ್ಯ ಜ್ಯೋತಿ ಮತ್ತಿತರರು ಇದ್ದರು.

Join Whatsapp