ಓಟ ಮುಗಿಸಿದ ‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಮಿಲ್ಖಾ ಸಿಂಗ್ । ಕಂಬನಿ ಮಿಡಿದ ಗಣ್ಯರು  

Prasthutha|

ಕಳೆದ ತಿಂಗಳು ಕೋವಿಡ್ ಪಾಸಿಟಿವ್ ಆಗಿ ಚಿಕಿತ್ಸೆ ಪಡೆದು ನೆಗೆಟಿವ್ ಆಗಿದ್ದ ‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಮಿಲ್ಖಾ ಸಿಂಗ್  ನಿಧನರಾಗಿದ್ದಾರೆ. ಅವರು ಜ್ವರಪೀಡಿತರಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

- Advertisement -

ಅವರು ಅನಿರೀಕ್ಷಿತವಾಗಿ ಜ್ವರ ಪೀಡಿತರಾಗಿದ್ದು, ಈ ವೇಳೆ ಆಮ್ಲಜನಕ ಮಟ್ಟದಲ್ಲೂ ಕುಸಿತ ಕಂಡು ಬಂದಿತ್ತು. 91 ರ ಹರೆಯದ ಮಿಲ್ಖಾ ಸಿಂಗ್ ರನ್ನು ತೀವ್ರ ನಿಗಾ‌ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು‌ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಅವರ ಪತ್ನಿ ಇತ್ತೀಚೆಗೆ ಕೋವಿಡ್ ನಿಂದ ಮೃತಪಟ್ಟಿದ್ದರು.

ಶುಕ್ರವಾರ ರಾತ್ರಿ 11:30ಕ್ಕೆ ಮಿಲ್ಖಾ ಸಿಂಗ್ ಮೃತಪಟ್ಟಿದ್ದಾಗಿ ಅವರ ಕುಟುಂಬ ತಿಳಿಸಿದೆ. ಮಿಲ್ಖಾ ಸಿಂಗ್ ಒಲಿಂಪಿಕ್ಸ್ ನಲ್ಲಿ ಮೂರು ಬಾರಿ ಭಾರತವನ್ನು ಪ್ರತಿನಿಧಿಸಿದ್ದರು.

- Advertisement -

1960ರ ರೋಮ್​ ಒಲಿಂಪಿಕ್ಸ್​ನ 400 ಮೀಟರ್ಸ್​ ಓಟದಲ್ಲಿ ನಾಲ್ಕನೇ ಸ್ಥಾನ ಗಳಿದ್ದ ಮಿಲ್ಖಾಸಿಂಗ್​, 1956 ಮತ್ತು 1964ರ ಒಲಿಂಪಿಕ್ಸ್​ನಲ್ಲಿ ಭಾರತವನ್ನ ಪ್ರತಿನಿಧಿಸಿದ್ದರು. 1958ರ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಏಷ್ಯನ್​ ಗೇಮ್ಸ್​ನಲ್ಲಿ 4 ಬಾರಿ ಸ್ವರ್ಣ ಪದಕ ಗೆದ್ದ ಹೆಗ್ಗಳಿಕೆ ಅವರದ್ದು.

ಒಲಿಂಪಿಕ್ಸ್​ಗೆ ಅಥ್ಲೆಟಿಕ್ಸ್​ ಕಿರೀಟವಿದ್ದಂತೆ. ಎಲ್ಲ ದೇಶದ ಅಥ್ಲೀಟ್​ಗಳು ಸ್ಪರ್ಧಿಸುತ್ತಾರೆ. ಈ ವಿಭಾಗದಲ್ಲಿ ಭಾರತಕ್ಕೊಂದು ಪದಕ ಬರಲೇಬೇಕು ಎಂಬುದು ಮಿಲ್ಖಾ ಸಿಂಗ್​ರ ಕೊನೆಯ ಆಸೆ. ನಾನು ಸಾಯುವುದರೊಳಗೆ ಭಾರತದ ಅಥ್ಲೀಟ್​ ಒಲಿಂಪಿಕ್​ ಪದಕ ಗೆಲ್ಲುವುದನ್ನು ಕಣ್ತುಂಬಿಕೊಳ್ಳಬೇಕು.

ಇದೇ ನನ್ನ ಕೊನೆಯ ಆಸೆ ಎಂದು ಹಲವು ಸಂದರ್ಶನಗಳಲ್ಲಿ ಮಿಲ್ಖಾಸಿಂಗ್​ ಹೇಳಿದ್ದರು. 1960ರ ರೋಮ್​ ಒಲಿಂಪಿಕ್ಸ್ ​ನಲ್ಲಿ ಫೈನಲ್​ ತಲುಪಿದ್ದ ಮಿಲ್ಖಾಸಿಂಗ್​, ಕೊಂಚದರಲ್ಲಿ ಪದಕ ತಪ್ಪಿಸಿಕೊಂಡಿದ್ದರು. ಆದರೆ ಮಿಲ್ಖಾಸಿಂಗ್ ​ರ ಕೊನೇ ಆಸೆ ಈಡೇರಲೇ ಇಲ್ಲ.

Join Whatsapp