ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನ ಮೈದಾನ ಉಳಿಸಲು ಹೋರಾಟ ಅನಿವಾರ್ಯ : ಕ್ಯಾಂಪಸ್ ಫ್ರಂಟ್

Prasthutha|

ಶಿವಮೊಗ್ಗ : ಜಿಲ್ಲೆಯ ಶಿಕ್ಷಣ ಕೇಂದ್ರ ಬಿಂದು ಆಗಿರುವ ಸಹ್ಯಾದ್ರಿ ಕಾಲೇಜಿನ ಮೈದಾನವನ್ನು ಖೇಲೋ ಇಂಡಿಯಾ ಯೋಜನೆಯ ವಿಶೇಷ ಕ್ರೀಡಾ ತರಬೇತಿ ಕೇಂದ್ರಕ್ಕಾಗಿ ಆಯ್ಕೆ ಮಾಡಿದ ಜಿಲ್ಲೆಯ ಸಂಸದರ ನಿರ್ಧಾರವು ನಿರಾಶದಾಯಕವೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಮುಜಾಹಿದ್ ಹೇಳಿದ್ದಾರೆ.

- Advertisement -

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ ಇನ್ನೂ ಹಲವಾರು ಸಾಧಕರನ್ನು ವಿದ್ಯೆ ನೀಡಿ ಸಮಾಜಕ್ಕೆ ತನ್ನದೇ ಆದ ಅದ್ಭುತ ಕೊಡುಗೆ ನೀಡಿದ ಕೀರ್ತಿ ಸಹ್ಯಾದ್ರಿ ಕಾಲೇಜಿಗೆ ಸಲ್ಲುತ್ತದೆ. ಈ ಕಾಲೇಜಿಗೆ ಶತಮಾನದ ಇತಿಹಾಸವಿದೆ ಗಿಡಮರಗಳಿಂದ ಕೂಡಿದ ಕಾಲೇಜಿನ ಹಚ್ಚ ಹಸಿರಿನ ಪರಿಸರದ ವಾತಾವರಣವು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ತನ್ನತ್ತ ಗಮನ ಸೆಳೆಯುತ್ತದೆ. ಇದಕ್ಕೆ ಪ್ರಮುಖವಾದ ಕಾರಣ ಕಾಲೇಜಿನ ನೋಟವನ್ನು ವೈಭವಗೊಳಿಸಿರುವ ಕಾಲೇಜಿನ ಮೈದಾನವಾಗಿದೆ.

ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ, ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯಾನುಸಾರವಾಗಿ ಈಗಿರುವ ಮೈದಾನವು ಹೊಂದುವಂತಿದೆ. ಆದರೆ ಈ ಮೈದಾನವನ್ನು ಬೇರೆ ಯೋಜನೆಗಳಿಗೆ ಮಿಸಲಿಟ್ಟರೆ ಇದರಿಂದಾಗಿ ಮೂಲಸೌಕರ್ಯಗಳ ಸಮಸ್ಯೆ ಉಂಟಾಗಬಹುದು. ವ್ಯಾಸಂಗ ಮಾಡುವ ಸಾವಿರಾರು ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗಲಿದೆ. ಆದ ಕಾರಣ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಕ್ರೀಡಾ ತರಬೇತಿ ಕೇಂದ್ರ ನಿರ್ಮಿಸದೆ ಇದನ್ನು ಮೈದಾನದ ಹೊರತು ಬೇರೆಕಡೆ ಸ್ಥಳಾಂತರಿಸಬೇಕೆಂದು ಕ್ಯಾಂಪಸ್ ಫ್ರಂಟ್ ಒತ್ತಾಯಿಸಿದೆ. ಒಂದು ವೇಳೆ ಸ್ಥಳ ಬದಲಿಸದೆ ಹೋದಲ್ಲಿ  ‘ಸಹ್ಯಾದ್ರಿ ಕಾಲೇಜಿನ ಮೈದಾನ ಉಳಿಸಿ’ ಎಂಬ ಆಂದೋಲನವು ಪ್ರಾರಂಭಿಸಲಾಗುವುದು ಎಂದು ಮುಜಾಹಿದ್ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿಯಾದ ಲುಕ್ಮಾನ್, ಜಿಲ್ಲಾ ಉಪಾಧ್ಯಕ್ಷರಾದ ಮುಶೈದ್, ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಮುಶೈದ್ , ದಾದಾಪೀರ್ ಹಾಜರಿದ್ದರು.

Join Whatsapp