ಮಧ್ಯಪ್ರದೇಶ: ಲಸಿಕೆಗಾಗಿ ನೂಕುನುಗ್ಗಲು| ಕಾಲ್ತುಳಿತಕ್ಕೊಳಗಾಗಿ ಹಲವರು ಗಂಭೀರ!

Prasthutha|

ಮಧ್ಯಪ್ರದೇಶ: ಲಸಿಕೆ ಸ್ವೀಕರಿಸಲು ಸೇರಿದ್ದ ಕಿಕ್ಕಿರಿದ ಜನಸ್ತೋಮದಿಂದ ನೂಕು ನುಗ್ಗಲು ಸಂಭವಿಸಿ ಅನೇಕ ಜನರು ಗಂಭೀರ ಗಾಯಗೊಂಡ ಘಟನೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಲಸಿಕಾ ಕೇಂದ್ರದಲ್ಲಿ ನಡೆದಿದೆ.

- Advertisement -

ಬೆಳಿಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಲಸಿಕಾ ಕೇಂದ್ರವನ್ನು ತೆರೆದಾಗ ನೂರಾರು ಜನರು ಲಸಿಕಾ ಕೇಂದ್ರಕ್ಕೆ ನುಗ್ಗಿದ್ದು ನೂಕು ನುಗ್ಗಲು ಸಂಭವಿಸಿ ಅನೇಕ ಜನರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯ ವೀಡಿಯೋ ವ್ಯಾಪಕ ವೈರಲಾಗಿದೆ.

ನೂಕು ನುಗ್ಗಲು ಸಂಭವಿಸಿ ಹಲವಾರು ವೃದ್ಧರೂ ಮಹಿಳೆಯರೂ ಗಾಯಗೊಂಡಿದ್ದು, ಜನರ ದಟ್ಟಣೆಯನ್ನು ನಿಯಂತ್ರಿಸಲು ಲಸಿಕಾ ಕೇಂದ್ರದಲ್ಲಿ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

Join Whatsapp