ಮಧ್ಯಪ್ರದೇಶ: ಹೋಳಿ ಸಂಭ್ರಮಾಚರಣೆಯ ಭರದಲ್ಲಿ ಚಾಕುವಿನಿಂದ ತನ್ನನ್ನೇ ಚುಚ್ಚಿಕೊಂಡ ಯುವಕ; ವೀಡಿಯೋ ವೈರಲ್

Prasthutha|

ಇಂದೋರ್: ಹೋಳಿ ಸಂಭಮಾಚರಣೆಯ ಭರದಲ್ಲಿ ತನಗರಿವಿಲ್ಲದೆ ಚಾಕುವಿನಿಂದ ತನ್ನನ್ನೇ ಚುಚ್ಚಿಕೊಂಡ ಹಿನ್ನೆಲೆಯಲ್ಲಿ ಸಾವನ್ನಪ್ಪಿದ ವಿಲಕ್ಷಣ ಘಟನೆ ಮಧ್ಯಪ್ರದೇಶದಿಂದ ವರದಿಯಾಗಿದೆ.

- Advertisement -

ಹೋಳಿ ಪ್ರಯುಕ್ತ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಗುಂಪೊಂದು ಖಳ ನಾಯಕ್ ಹಾಡಿದ ಭರ್ಜರಿಯಾಗಿ ಡ್ಯಾನ್ಸ್ ಮಾಡಿ ಆನಂಧಿಸುತ್ತಿರುವಾಗ ಯುವಕನೊಬ್ಬ ತನ್ನ ಕೈಯಲ್ಲಿದ್ದ ಹರಿತವಾದ ಚಾಕುವಿನಿಂದ ತನಗರಿವಿಲ್ಲದೆ ತನ್ನನ್ನೇ ಚುಚ್ಚಿದ ಪರಿಣಾಮವಾಗಿ ಎದೆಯ ಭಾಗಕ್ಕೆ ಗಂಭೀರ ಗಾಯಗಳಾಗಿ ಕ್ಷಣಾರ್ಧದಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹರಿತವಾದ ಚಾಕುವಿನೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ ಯುವಕನೊಬ್ಬ ತನಗರಿವಿಲ್ಲದೆ ತನ್ನ ಕೈಯಲ್ಲಿದ್ದ ಚಾಕುವಿನಿಂದ ಎದೆಯ ಭಾಗಕ್ಕೆ ಚುಚ್ಚಿದ ಕಾರಣ ಗಂಭೀರ ಗಾಯಗಳಾಗಿ ಮೃತಪಟ್ಟಿದ್ದಾನೆ. ಚಾಕುವಿನಿಂದ ತನ್ನನ್ನೇ ಚುಚ್ಚುತ್ತಿರುವ ದೃಶ್ಯಾವಳಿ ವೈರಲ್ ವೀಡಿಯೋದಲ್ಲಿ ಸೆರೆಯಾಗಿದ್ದು, ಆ ಸಂದರ್ಭದಲ್ಲಿ ಯುವಕನ ದೇಹದಿಂದ ರಕ್ತ ಚಿಮ್ಮುತ್ತಿರುವುದು ವೀಡಿಯೋದಲ್ಲಿ ಗೋಚರಿಸಿದೆ. ಈ ವೇಳೆ ಮಹಿಳೆಯೊಬ್ಬರು ಯುವಕನ ರಕ್ಷಣೆಗೆ ಧಾವಿಸಿದಾದರೂ ಕೂಡ ಅಧಿಕ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿವೆ.

Join Whatsapp