11 ವರ್ಷದ ಬಾಲಕಿ ಮೇಲೆ ತಂದೆ, ಚಿಕ್ಕಪ್ಪ, ಅಜ್ಜ, ಸಹೋದರನಿಂದ ಅತ್ಯಾಚಾರ!

Prasthutha|

ಪುಣೆ: 11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಆಕೆಯ ತಂದೆ, ಚಿಕ್ಕಪ್ಪ, ಅಜ್ಜ ಮತ್ತು ಒಡಹುಟ್ಟಿದ ಸಹೋದರ ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

- Advertisement -

11 ವರ್ಷದ ಬಾಲಕಿ ಕೋರೆಗಾಂವ್ ಪ್ರದೇಶದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದು, ಮಕ್ಕಳಿಗೆ ತರಗತಿಯಲ್ಲಿ ಕೌನ್ಸಿಲಿಂಗ್ ಚಟುವಟಿಕೆ ಅಂಗವಾಗಿ ‘ಗುಡ್ ಟಚ್’, ‘ಬ್ಯಾಡ್ ಟಚ್’ ಬಗ್ಗೆ ಹೇಳಿಕೊಡಲಾಗುತ್ತಿತ್ತು. ಬಾಲಕಿಗೆ ಇದರ ಬಗ್ಗೆ ತಿಳಿ ಹೇಳುತ್ತಿದ್ದಾಗ ತನ್ನ ಮೇಲೆ ಈವರೆಗೆ ನಡೆದ ದೌರ್ಜನ್ಯದ ಬಗ್ಗೆ ಬಾಯ್ಬಿಟ್ಟಿದ್ದಾಳೆ.

2017ರಲ್ಲಿ ಬಾಲಕಿ ತನ್ನ ಕುಟುಂಬದೊಂದಿಗೆ ಬಿಹಾರದಲ್ಲಿ ವಾಸವಾಗಿದ್ದ ವೇಳೆ ಪಾಪಿ ತಂದೆ ಆಕೆಯ ಮೇಲೆ ಬಲವಂತವಾಗಿ ಲೈಂಗಿಕ ಸಂಬಂಧ ಬೆಳೆಸಿದ್ದನು. ಇದಾದ ಬಳಿಕ 2020ರಲ್ಲಿ ಬಾಲಕಿ ಮೇಲೆ ಆಕೆಯ ಸಹೋದರ, 2021ರಲ್ಲಿ ಅಜ್ಜ ಮತ್ತು ಚಿಕ್ಕಪ್ಪ ಸಹ ದುಷ್ಕೃತ್ಯವೆಸಗಿದ್ದಾರೆಂದು ಪೊಲೀಸ್ ಇನ್ಸ್ಪೆಕ್ಟರ್ ಪ್ರತಾಪ್ ಮಾನ್ಕರ್ ತಿಳಿಸಿದ್ದಾರೆ.

- Advertisement -

ಸಂತ್ರಸ್ತೆಯ ತಂದೆ, ಸಹೋದರ, ಅಜ್ಜ ಮತ್ತು ಚಿಕ್ಕಪ್ಪನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp