November 25, 2020

ಡಿ.5ರಂದು ಅಖಂಡ ಕರ್ನಾಟಕ ಬಂದ್ ಶತಸಿದ್ಧ : ವಾಟಾಳ್ ನಾಗರಾಜ್ ಘೋಷಣೆ

ಬೆಂಗಳೂರು : ಬೀದರ್ ನಿಂದ ಚಾಮರಾಜನಗರದ ವರೆಗೆ, ಮಂಗಳೂರಿನಿಂದ ಕೋಲಾರದ ವರೆಗೂ ಡಿ.5ರಂದು ಕರ್ನಾಟಕ ಬಂದ್ ನಡೆಯುವುದು ಶತಸಿದ್ಧ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಂದ್ ನೂರಕ್ಕೆ ನೂರು ಯಶಸ್ವಿ ಖಚಿತ ಎಂದಿದ್ದಾರೆ.

ಇದು ಯಾರದ್ದೋ ಮನೆ ಉದ್ದಾರಕ್ಕಾಗಿ ಮಾಡುತ್ತಿರುವ ಹೋರಾಟವಲ್ಲ. ಸಮಗ್ರ ಕರ್ನಾಟಕ ಹಾಗೂ ಪ್ರತಿಯೊಬ್ಬ ಕನ್ನಡಿಗರಿಗಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ನಾಳೆಯಿಂದಲೇ ಹೋರಾಟ ತೀವ್ರಗೊಳ್ಳಲಿದೆ. ಡಿ.1ರಮದು ವಿಜಯಪುರಕ್ಕೆ ಸುಮಾರು 10,000 ಹೋರಾಟಗಾರರು ತೆರಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸುವ ರಾಜ್ಯ ಬಿಜೆಪಿ ಸರಕಾರದ ನಿರ್ಧಾರವನ್ನು ಖಂಡಿಸಿ, ಕನ್ನಡಪರ ಹೋರಾಟಗಾರರು ಈ ಹೋರಾಟ ಸಂಯೋಜಿಸುತ್ತಿದ್ದಾರೆ.  

ಟಾಪ್ ಸುದ್ದಿಗಳು

ವಿಶೇಷ ವರದಿ