ಕಾಸರಗೋಡು | ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರು ಮೃತ್ಯು

Prasthutha|

- Advertisement -

ಕಾಸರಗೋಡು: ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಕಾಸರಗೋಡು ಮೂಲದ ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ ಕಣ್ಣೂರು ಜಿಲ್ಲೆಯ ಕಣ್ಣಾಪುರದಲ್ಲಿ ಸಂಭವಿಸಿದೆ.

ಕೆ.ಎನ್.ಪದ್ಮಕುಮಾರ್ (59), ಭೀಮನಡಿ ಚೂರಿಕ್ಕಾಡ್ ನಿವಾಸಿ ಸುಧಾಕರನ್(52), ಸುಧಾಕರನ್ ಅವರ ಪತ್ನಿ ಅಜಿತಾ (35), ಅವರ ತಂದೆ ಕೊಜುಮ್ಮಲ್ ಕೃಷ್ಣನ್ (65) ಮತ್ತು ಅಜಿತಾ ಅವರ ಸಹೋದರ ಅಜಿತ್ ಅವರ ಪುತ್ರ ಆಕಾಶ್ (9) ಮೃತಪಟ್ಟವರು ಎಂದು ತಿಳಿದುಬಂದಿದೆ.

- Advertisement -

ಕಣ್ಣೂರು ಕಡೆಯಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಕಾರು ಮತ್ತು ಕಣ್ಣೂರು ಕಡೆಗೆ ತೆರಳುತ್ತಿದ್ದ ಅಡುಗೆ ಅನಿಲ ಸಿಲಿಂಡರ್ ಸಾಗಾಟದ ಲಾರಿ ನಡುವೆ ಅಪಘಾತ ನಡೆದಿದೆ.

Join Whatsapp