ಬಿಬಿಸಿ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಶಹೀನ್ ಬಾಗ್ ಸಿಎಎ ವಿರೋಧಿ ಹೋರಾಟಗಾರ್ತಿ ಬಿಲ್ಕಿಸ್ ದಾದಿ

Prasthutha|

ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಶಹೀನ್ ಬಾಗ್ ಪ್ರತಿಭಟನೆಯ ಮೂಲಕ ಗಮನ ಸೆಳೆದಿದ್ದ ಬಿಲ್ಕಿಸ್ ದಾದಿ, ಬಿಬಿಸಿಯ ಜಗತ್ತಿನ 100 ಸ್ಫೂರ್ತಿದಾಯಕ ಮತ್ತು ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದ್ದಾರೆ.

ತಮ್ಮ 82ನೇ ವಯಸ್ಸಿನಲ್ಲೂ ಸಿಎಎ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡ ಆಕೆಯನ್ನು ಸುದ್ದಿ ಸಂಸ್ಥೆಯು ಈ ಪಟ್ಟಿಯಲ್ಲಿ ಗುರುತಿಸಿದೆ.

- Advertisement -

ಪ್ರತಿಷ್ಠಿತ ಟೈಮ್ ಮ್ಯಾಗಜಿನ್ ನ ಈ ವರ್ಷದ 100 ಪ್ರಭಾವಿ ಜನರ ಪಟ್ಟಿಯಲ್ಲಿ ಕೂಡ ಬಿಲ್ಕಿಸ್ ದಾದಿ ಗುರುತಿಸಲ್ಪಟ್ಟಿದ್ದರು.

ಶಹೀನ್ ಬಾಗ್ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಬಿಲ್ಕಿಸ್ ದಾದಿ, ಉತ್ತರ ಪ್ರದೇಶದ ಹಾಪುರ ಮೂಲದವರು. ಪ್ರಸ್ತುತ ಅವರು ಶಹೀನ್ ಬಾಗ್ ನಲ್ಲಿ ತಮ್ಮ ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.  

- Advertisement -