ಕ್ಯಾಪಿಟಲ್ಸ್ ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ 7 ವಿಕೆಟ್‌ಗಳ ರೋಚಕ ಜಯ

Prasthutha|

ಕೋಲ್ಕತ್ತಾ: ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 7 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

- Advertisement -

ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಡೆಲ್ಲಿಗೆ 9 ವಿಕೆಟ್‌ನಷ್ಟಕ್ಕೆ 153 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಲಷ್ಟೇ ಸಾಧ್ಯವಾಗಿತ್ತು.

ಸವಾಲು ಬೆನ್ನಟ್ಟಿದ ಕೋಲ್ಕತ್ತಾ 16.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 157 ರನ್‌ ಕಲೆಹಾಕಿ ಗೆಲುವಿನ ನಗೆ ಬೀರಿದೆ.

- Advertisement -

ಕೋಲ್ಕತ್ತಾ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡಿದ ಸನ್ನಿವೇಶ ಕಂಡುಬಂದಿತು. 35 ರನ್ ಗಳಿಸಿದ ಕುಲದೀಪ್ ಯಾದವ್ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದರು.

ಡೆಲ್ಲಿ ತಂಡ ಇದುವರೆಗೆ ಆಡಿರುವ ಹತ್ತು ಪಂದ್ಯಗಳಲ್ಲಿ ಐದು ಜಯಿಸಿದೆ. ಐದರಲ್ಲಿ ಸೋತಿದೆ. ಕೋಲ್ಕತ್ತಾ ತಂಡ ಎಂಟು ಪಂದ್ಯಗಳಲ್ಲಿ ಆಡಿದ್ದು, ಆ ಪೈಕಿ ಐದು ಜಯಿಸಿ, ಮೂರರಲ್ಲಿ ಸೋತಿದೆ. ಇದರೊಂದಿಗೆ ಉತ್ತಮ ರನ್‌ ರೇಟ್ ಸಹ ಇರುವುದರಿಂದ ತಂಡ ಎರಡನೇ ಸ್ಥಾನದಲ್ಲಿದೆ.

Join Whatsapp