ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ದೇಶದ ಅತ್ಯಂತ ಎತ್ತರದ ವೀಕ್ಷಣಾ ಗೋಪುರ

Prasthutha|

ಬೆಂಗಳೂರು: ಬೆಂಗಳೂರಿನಲ್ಲಿ ದೇಶದ ಅತ್ಯಂತ ಎತ್ತರದ ವೀಕ್ಷಣಾ ಗೋಪುರ ನಿರ್ಮಾಣಗೊಳ್ಳಲಿದೆ. ಶಾಂಘಾಯ್ ವೀಕ್ಷಣಾ ಗೋಪುರಗಳ ಮಾದರಿಯಲ್ಲಿ ಇದು ನಿರ್ಮಾಣವಾಗಲಿದೆ. ಬ್ರ್ಯಾಂಡ್‌ ಬೆಂಗಳೂರಿನ ಯೋಜನೆಗಳಲ್ಲಿ ಇದು ಮಹತ್ವದ ಸ್ಥಾನ ಪಡೆಯುವ ಸಾಧ್ಯತೆ ಇದೆ.

- Advertisement -

ಡಿಸಿಎಂ ಡಿಕೆ ಶಿವಕುಮಾರ್‌ ಈ‌ ಕುರಿತು ಉತ್ಸುಕರಾಗಿದ್ದು, ವೀಕ್ಷಣಾ ಗೋಪುರ ನಿರ್ಮಾಣಕ್ಕೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಿರ್ಮಾಣ ಮತ್ತು ನಿರ್ವಹಣೆಯ ಖರ್ಚುವೆಚ್ಚಗಳ ಬಗ್ಗೆ ನಿರ್ಣಯಿಸಲು ಅಧಿಕಾರಿಗಳಿಗೆ ನಿರ್ದೇಶನವನ್ನೂ ನೀಡಿದ್ದಾರೆ.

ಆಸ್ಟ್ರಿಯಾ ಮೂಲದ ಸಂಸ್ಥೆ ಹಾಗೂ ವರ್ಲ್ಡ್ ಡಿಸೈನ್ ಆರ್ಗನೈಸೇಶನ್ ಸಹಕಾರದೊಂದಿಗೆ ವೀಕ್ಷಣಾ ಗೋಪುರ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ ಎಂದು ಡಿಕೆಶಿ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

- Advertisement -

ಇದು ನಿರ್ಮಾಣವಾದರೆ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಇದಾಗಲಿದೆ. ಯೋಜನೆಯ ಅನುಷ್ಠಾನಕ್ಕೆ 8-10 ಎಕರೆ ಭೂಮಿ ಅಗತ್ಯವನ್ನು ಮನಗಾಣಲಾಗಿದೆ.

ಸದ್ಯ ಭಾರತದಲ್ಲಿ ರಾಮೇಶ್ವರಂ ಟಿವಿ ಟವರ್ (393 ಮೀಟರ್), ಮುಂಬಯಿ ಟಿವಿ ಟವರ್ (300 ಮೀಟರ್) ಪೀತಾಂಪುರ ಟಿವಿ ಟವರ್ (235 ಮೀಟರ್) ಅತ್ಯಂತ ದೊಡ್ಡ ಗೋಪುರಗಳಾಗಿವೆ. ಆದರೆ ಇವುಗಳಲ್ಲಿ ಸಾರ್ವಜನಿಕರಿಗೆ ವೀಕ್ಷಣೆ ಲಭ್ಯವಿಲ್ಲ. ಗುಜರಾತ್ನ ಏಕತಾ ಪ್ರತಿಮೆಯಲ್ಲಿ ವೀಕ್ಷಣೆಗೆ ಅವಕಾಶವಿದ್ದರೂ ಇದರ ಎತ್ತರ 182 ಮೀಟರ್ಗಳಾಗಿದ್ದು, ಇದಕ್ಕಿಂತಲೂ ಎತ್ತರದಲ್ಲಿ ಕರ್ನಾಟಕದಲ್ಲಿ ಗೋಪುರ ನಿರ್ಮಿಸುವ ಚಿಂತನೆ ನಡೆಯುತ್ತಿದೆ.

Join Whatsapp