ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದ ಭಾರತ ಸರ್ಕಾರ

Prasthutha|

ನವದೆಹಲಿ: ಭಾರತದಲ್ಲಿನ ಬೆಲೆಯೇರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರ ಗೋಧಿ ರಫ್ತನ್ನು ನಿಷೇಧಿಸಿದೆ. ಈ ಅಧಿಸೂಚನೆಯ ಮೊದಲು ನೀಡಲಾದ ಒಪ್ಪಂದ ಮತ್ತು ಸಾಲದ ಪತ್ರಗಳಿಗೆ ಮಾತ್ರ ರಫ್ತು ಸಾಗಣೆಗೆ ಅನುಮತಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

- Advertisement -

ಜೊತೆಗೆ ಇತರೆ ದೇಶಗಳ ಕೋರಿಕೆಯ ಮೇರೆಗೆ ರಫ್ತು ಮಾಡಲು ಸರ್ಕಾರ ಅವಕಾಶ ನೀಡುತ್ತದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

“ದೇಶದ ಒಟ್ಟಾರೆ ಆಹಾರ ಭದ್ರತೆಯನ್ನು ನಿರ್ವಹಿಸಲು ಮತ್ತು ನೆರೆಯ, ಇತರ ದುರ್ಬಲ ರಾಷ್ಟ್ರಗಳ ಅಗತ್ಯಗಳನ್ನು ಬೆಂಬಲಿಸುವ ಸಲುವಾಗಿ” ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

- Advertisement -

ಮಾರ್ಚ್‌ನಲ್ಲಿ ತಾಪಮಾನ ಏರಿಕೆಯಿಂದಾಗಿ ಭಾರಿ ಬೆಳೆ ನಷ್ಠದ ಬಳಿಕ ಗೋಧಿ ರಫ್ತನ್ನು ನಿಷೇಧಿಸುವ ಕುರಿತು ಚಿಂತಿಸಲಾಗಿದೆ. ಏಪ್ರಿಲ್ ನಲ್ಲಿ ಶೇಕಡಾ 7.79ಕ್ಕೆ ಏರಿದ ಹಣದುಬ್ಬರವನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಒತ್ತಡಕ್ಕೆ ಸಿಲುಕಿದೆ ಎಂದು ತಿಳಿದು ಬಂದಿದೆ.

ಅಲ್ಲದೆ ಬೃಹತ್ ಮಟ್ಟದ ರಫ್ತನ್ನು ಘೋಷಿಸಿದ ಎರಡು ದಿನಗಳ ಬಳಿಕ ಸರ್ಕಾರ ಯೂ ಟರ್ನ್ ಹೊಡೆದಿದೆ.

“ದೇಶದಲ್ಲಿ ಸಾಕಷ್ಟು ಗೋಧಿ ದಾಸ್ತಾನು ಇರುವುದರಿಂದ ಗೋಧಿ ರಫ್ತಿಗೆ ಕಡಿವಾಣ ಹಾಕಲು ಯಾವುದೇ ಕ್ರಮವಿಲ್ಲ” ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಈ ಹಿಂದೆ ತಿಳಿಸಿದ್ದರು.

ಯೋಜನೆಯಲ್ಲಿನ ಹಠಾತ್ ಬದಲಾವಣೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಸರ್ಕಾರ ಪ್ರತಿಕ್ರಿಯಿಸಿದ್ದು, ಬೆಳೆ ನಷ್ಟವು ಆಹಾರ ಭದ್ರತೆಯ ಕಾಳಜಿಗೆ ಕಾರಣವಾದ ನಂತರ ಚೀನಾವು ಭಾರತದಿಂದ ಆಹಾರ ಧಾನ್ಯಗಳನ್ನು ಸೆಳೆಯುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Join Whatsapp