ಅಜಾಝ್ 10 ವಿಕೆಟ್‌ ಸಾಧನೆ ತಪ್ಪಿಸಲು ಡಿಕ್ಲೇರ್‌ ಮಾಡುವಂತೆ ಮನವಿ ಮಾಡಿದ್ದ ಕ್ರಿಕೆಟ್ ಅಭಿಮಾನಿಗಳು!

Prasthutha|

ಮುಂಬೈ: ನ್ಯೂಜಿಲೆಂಡ್‌ನ ಎಡಗೈ ಸ್ಪಿನ್ನರ್‌ ಅಜಾಝ್ ಪಟೇಲ್‌ ಅವರ 10 ವಿಕೆಟ್‌ಗಳ ಸಾಧನೆಯನ್ನು ತಪ್ಪಿಸಲು ‘ಡಿಕ್ಲೇರ್‌ ಕರೋ, ಡಿಕ್ಲೇರ್‌ ಕರೋ’ ಎಂದು ಕೆಲವು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.

- Advertisement -


ಭಾರತ ತಂಡದ ಜಯಂತ್‌ ಯಾದವ್‌ ಅವರ ವಿಕೆಟ್‌ ಪಡೆಯುವುದರೊಂದಿಗೆ 9 ವಿಕೆಟ್ ಗಳನ್ನು ಗಳಿಸಿದ ಎಜಾಝ್ ಇನ್ನೇನು ಜಿಮ್‌ ಲೇಕರ್‌ ಮತ್ತು ಅನಿಲ್‌ ಕುಂಬ್ಳೆ ಅವರ ಸಾಧನೆಯನ್ನು ಸರಿಗಟ್ಟುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ‘ಡಿಕ್ಲೇರ್‌ ಕರೋ, ಡಿಕ್ಲೇರ್‌ ಕರೋ’ ಎಂದು ಬೊಬ್ಬೆ ಹಾಕಿದ್ದು, ಈ ವೀಡಿಯೋ ಭಾರೀ ವೈರಲ್ ಆಗಿದೆ.

ಆದರೆ ಅದೇ ಓವರ್ ನಲ್ಲಿ ಮೊಹಮ್ಮದ್‌ ಸಿರಾಜ್‌ ವಿಕೆಟ್ ಪಡೆದ ಅಜಾಝ್ ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿದ ದಾಖಲೆ ನಿರ್ಮಿಸಿ ಬೀಗಿದ್ದಾರೆ.

- Advertisement -

ಅಜಾಝ್ ಪಟೇಲ್‌ ಅವರಿಗೆ ಅಭಿನಂದನೆ ತಿಳಿಸಿರುವ ಅನಿಲ್‌ ಕುಂಬ್ಳೆ, 10 ವಿಕೆಟ್‌ ಸಾಧಕರ ಕ್ಲಬ್‌ಗೆ ಸ್ವಾಗತ ಎಂದು ಟ್ವೀಟ್‌ ಮಾಡಿದ್ದಾರೆ.

Join Whatsapp