4 ವರ್ಷಗಳಲ್ಲಿ 170 ಕೈ ಶಾಸಕರ ಪಕ್ಷಾಂತರ । ಬಿಜೆಪಿಯಿಂದ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

Prasthutha|

2016-2020 ರ ನಡುವೆ ನಡೆದ ಚುನಾವಣೆಯ ಸಂದರ್ಭದಲ್ಲಿ 170 ಶಾಸಕರು ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಅಧಿಕೃತ ಮಾಹಿತಿಯೊಂದನ್ನು ಹೊರಬಿಟ್ಟಿದೆ. ಈ ನಾಲ್ಕು ವರ್ಷಗಳಲ್ಲಿ 405 ಶಾಸಕರು ತಮ್ಮ ರಾಜಕೀಯ ಪಕ್ಷಗಳನ್ನು ಬದಲಾಯಿಸಿದ್ದಾರೆ. ಅದರಲ್ಲಿ 182 ಮಂದಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿಕೊಂಡಿದ್ದು 38 ಮಂದಿ ಕಾಂಗ್ರೆಸ್ಸಿಗೆ ಸೇರಿದ್ದಾರೆ ಮತ್ತು 25 ಮಂದಿ ತೆಲಂಗಾಣಕ್ಕೆ ರಾಷ್ಟ್ರ ಸಮಿತಿ (ಟಿಆರ್‌ಎಸ್) ಗೆ ಸೇರಿದ್ದಾರೆ ಎಂಬ ಮಾಹಿತಿಯನ್ನು ADR ಸಮೀಕ್ಷೆಯು ತಿಳಿಸಿದೆ.

- Advertisement -

2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಐದು ಲೋಕಸಭಾ ಸಂಸದರು ಬಿಜೆಪಿಯನ್ನು ತೊರೆದು ಇತರ ಪಕ್ಷಗಳಿಗೆ ಸೇರ್ಪಡೆಗೊಂಡಿದ್ದಾರೆ ಮತ್ತು ಏಳು ರಾಜ್ಯಸಭಾ ಸಂಸದರು ಕಾಂಗ್ರೆಸ್ ತೊರೆದು ಈ ನಡುವೆ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತೊಂದು ಪಕ್ಷಕ್ಕೆ ಸೇರಿದ್ದಾರೆ ಎಂದು ವರದಿ ತಿಳಿಸಿದೆ.

ಈ ಕಳೆದ ನಾಲ್ಕು ವರ್ಷಗಳ ಚುನಾವಣೆಯ ಸಂದರ್ಭದಲ್ಲಿ ಬರೋಬ್ಬರಿ 170 ಶಾಸಕರು ಕಾಂಗ್ರೆಸ್ ತೊರೆದಿದ್ದು, ಕೇವಲ 18 ಶಾಸಕರು ಮಾತ್ರ ಬಿಜೆಪಿಯನ್ನು ತೊರೆದು ಈ ಅವಧಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಮತ್ತೊಂದು ಪಕ್ಷಕ್ಕೆ ಸೇರಿದ್ದಾರೆ ಎನ್ನಲಾಗಿದೆ. ಅತಿ ಹೆಚ್ಚು ಪಕ್ಷಾಂತರಗೊಂಡದ್ದು ಮಧ್ಯಪ್ರದೇಶ, ಮಣಿಪುರ, ಗೋವಾ, ಅರುಣಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಎಂದು ವರದಿ ತಿಳಿಸಿದೆ

- Advertisement -