ಸೌದಿಯಲ್ಲಿ ಸಂಕಷ್ಟಕ್ಕೀಡಾಗಿದ್ದ ಕುಮಾರ್ ನೆರವಿಗೆ KCF ಸೌದಿ ಘಟಕ

Prasthutha|

ಸೌದಿಯ ರಿಯಾದಿನ ಕಂಪನಿಯೊಂದರಲ್ಲಿ ನೌಕರರಾಗಿದ್ದ ಮೂಡಿಗೆರೆಯ ಕುಮಾರ್ ಎಂಬವರು ತಾಯ್ನಾಡಿಗೆ ಮರಳಲು ಅಸಾಧ್ಯವಾಗಿತ್ತು. ಆ ಯುವಕನ ನೆರವಿಗೆ ಧಾವಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಘಟಕ, ಕುಮಾರ್ ಅವರನ್ನು ಅವರ ಊರಿಗೆ ಮರಳಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.

ಕಾರಾಣಾಂತರಗಳಿಂದ ಕುಮಾರ್ ರ ಮೇಲೆ ಕಂಪನಿಯು ಕೇಸು ದಾಖಲಿಸಿತ್ತು. ತೀರ್ಪು ಕುಮಾರ್ ಅವರ ವಿರುದ್ಧ ಬಂದಿದ್ದು, ನ್ಯಾಯಾಲಯ ಅವರ ಮೇಲೆ ದೊಡ್ಡ ಮೊತ್ತದ ದಂಡವನ್ನೂ ವಿಧಿಸಿತ್ತು . ಈ ವಿಷಯವು ಕೆಸಿಎಫ್ ಗೆ ತಲುಪಿದ್ದು, ಕೆಸಿಎಫ್ ಸಾಂತ್ವನ ಇಲಾಖೆಯ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಮಲೆಬಟ್ಟು ಅವರ ಗಮನಕ್ಕೆ ಬಂದಿತ್ತು ಎನ್ನಲಾಗಿದೆ.

- Advertisement -

ಯುವಕನ ಚಿಂತಾಜನಕ ಸ್ಥಿತಿಯಿಂದ ಪಾರಾಗಲು ಕೆಸಿಎಫ್ ಸೌದಿ ಘಟಕ ಮಹತ್ತರ ಪಾತ್ರ ವಹಿಸಿದ್ದು ಕುಮಾರ್ ತಾಯ್ನಾಡಿಗೆ ಮರಳುವಂತಾಗಿದೆ.

- Advertisement -