ಸೀಟು ಹಂಚಿಕೆ ಭಿನ್ನಮತ । SDPI ಮತ್ತು ಕಮಲ್ ಹಾಸನ್ ಪಕ್ಷದ ಮೈತ್ರಿ ಅಂತ್ಯ | TTV ದಿನಕರನ್ ಜೊತೆ SDPI ಹೊಸ ಮೈತ್ರಿ

Prasthutha|

► ಒಂದೇ ಮೈತ್ರಿಕೂಟದಲ್ಲಿ ಒವೈಸಿಯ AIMIM, SDPI !

- Advertisement -

ಚೆನ್ನೈ : ತಮಿಳುನಾಡು  ವಿಧಾನಸಭಾ ಚುನಾವಣೆಗೆ ನಿನ್ನೆಯಷ್ಟೇ ಎಸ್ಡಿಪಿಐ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಕಮಲ್ ಹಾಸನ್ ಅವರ MNM ಪಕ್ಷ ಇಂದು ಆ ಮೈತ್ರಿಯನ್ನು ಕಡಿದುಕೊಂಡಿದೆ. MNM ಹಾಗೂ SDPI ನಡುವೆ ಇದ್ದ ಸೀಟು ಹಂಚಿಕೆ ವಿವಾದವೇ ಈ ಮೈತ್ರಿ ಮುರಿದು ಬೀಳಲು ಕಾರಣ ಎನ್ನಲಾಗಿದೆ.

ಆದರೆ ಆ ಮೈತ್ರಿ ಮುರಿದು ಬಿದ್ದ ಬೆನ್ನಲ್ಲೇ ಎಸ್ಡಿಪಿಐ ಪಕ್ಷವು ಟಿಟಿವಿ ದಿನಕರನ್ ಅವರ MMK ಪಕ್ಷದ ಜೊತೆಗೆ ಮೈತ್ರಿ ಏರ್ಪಡಿಸಿಕೊಂಡಿದೆ. ಆ ಮೈತ್ರಿಯಲ್ಲಿ ಇದೀಗಾಗಲೇ ಸಂಸದ ಅಸದುದ್ದೀನ್ ಒವೈಸಿಯವರ AIMIM ಕೂಡಾ ಇದೆ ಎನ್ನುವುದು ಗಮನಾರ್ಹವಾಗಿದೆ. ಒವೈಸಿ ಪಕ್ಷಕ್ಕೆ 3 ಸೀಟುಗಳನ್ನು ಬಿಟ್ಟುಕೊಟ್ಟಿರುವ MMK ಪಕ್ಷ, ಎಸ್ಡಿಪಿಐಗೆ 6 ಸೀಟುಗಳನ್ನು ಮೈತ್ರಿ ಕರಾರಿನ ಪ್ರಕಾರ ಬಿಟ್ಟುಕೊಟ್ಟಿದೆ. ಹೀಗಾಗಿ MMK, AIMIM ಮತ್ತು SDPI ಒಟ್ಟಾಗಿ ಒಂದೇ ವೇದಿಕೆಯಲ್ಲಿ ಚುನಾವಣೆ ಎದುರಿಸಲಿದೆ.

- Advertisement -

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಬಿಜೆಪಿ ಕೂಡಾ ಎಸ್ಡಿಪಿಐ ಜೊತೆಗಿನ ಮೈತ್ರಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಟೀಕಿಸಿತ್ತು. ಬಿಜೆಪಿ ಜಪ ಮಾಡುವ ಕೆಲ ಮಾಧ್ಯಮಗಳೂ ಕಮಲ್ ಪಕ್ಷದೊಂದಿಗಿನ ಮೈತ್ರಿಯನ್ನು ತೀಕ್ಷ್ಣವಾಗಿ ವಿರೋಧಿಸಿತ್ತು.. ಮಾತ್ರವಲ್ಲ ಹಲವು ನಕಾರಾತ್ಮಕವಾದಂತಹಾ ಆಧಾರ ರಹಿತ ಸುದ್ದಿಗಳನ್ನು ತೇಲಿ ಬಿಟ್ಟಿತ್ತು.

Join Whatsapp