ಅಸ್ಸಾಂನ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ಘೋಷಣೆ

Prasthutha|

ಅಸ್ಸಾಂ : ಉನ್ನತ ಮಟ್ಟದ ಸಭೆ ನಡೆಸಿದ ಭಾರತೀಯ ಜನತಾ ಪಕ್ಷ (BJP) ಹಿಮಂತ ಬಿಸ್ವಾ ಶರ್ಮಾ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸುವುದರೊಂದಿಗೆ ಅಸ್ಸಾಂನ ಹೊಸ ಮುಖ್ಯಮಂತ್ರಿಯ ಬಗ್ಗೆ ಇದ್ದ ಎಲ್ಲಾ ಕುತೂಹಲಗಳಿಗೆ ಅಂತಿಮವಾಗಿ ತೆರೆಬಿದ್ದಿದೆ. ಮೇ 10ರ ಸೋಮವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಹಿಂದಿನ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ಭಾನುವಾರ ರಾಜ್ಯಪಾಲ ಜಗದೀಶ್ ಮುಖಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ರಾಜ್ ಭವನ್ ಮೂಲಗಳಿಂದ ತಿಳಿದು ಬಂದಿದೆ.

- Advertisement -

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಹುಮತವನ್ನು ಗಳಿಸಿದ ಬಿಜೆಪಿ ಪಕ್ಷ 126 ಸ್ಥಾನಗಳಲ್ಲಿ 60 ಸ್ಥಾನಗಳನ್ನು ಗೆದ್ದಿದೆ, NDA ಇತರ ಮೈತ್ರಿ ಪಕ್ಷಗಳಾದ ಎಜಿಪಿ ಒಂಬತ್ತು ಮತ್ತು ಯುಪಿಪಿಎಲ್ ಆರು ಸ್ಥಾನಗಳನ್ನು ಗೆದ್ದಿವೆ.

- Advertisement -