ಕೋವಿಡ್ ನಿಂದ ಮೃತಪಟ್ಟ ಪತಿ | ದುಃಖ ತಾಳಲಾರದೆ ಪತ್ನಿ ಆತ್ಮಹತ್ಯೆ!

Prasthutha|

ಕೊರೋನಾ ಸೋಂಕಿನಿಂದ ದೇಶದಾದ್ಯಂತ ತೀವ್ರಗತಿಯ ಹೆಚ್ಚಳದಿಂದಾಗಿ ಅಪಾರ ಸಾವು ನೋವುಗಳು ಸಂಭವಿಸುತ್ತಿದೆ. ಈ ನಡುವೆ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಗಂಡ ಮೃತಪಟ್ಟ ದುಃಖ ತಾಳಲಾರದೆ ಹತಾಶೆಗೊಂಡು ಪತ್ನಿ ಆಸ್ಪತ್ರೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಇಂದೋರ್ ನಲ್ಲಿ ನಡೆದಿದೆ.

ಇಂದೋರ್ ನ ಶಲ್ಬಿ ಆಸ್ಪತ್ರೆಯ 9ನೇ ಮಹಡಿಯಿಂದ ಹಾರಿ ಖುಷ್ಬೂ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೇ ಆಸ್ಪತ್ರೆಯಲ್ಲಿ ಅವರ ಪತಿ ರಾಹುಲ್ ಅವರು ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.

- Advertisement -

ಈ ಬಗ್ಗೆ ಮಾಹಿತಿ ನೀಡಿರುವ ತುಕೊಗಂಜ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ದೇವಿ ದಯಾಲ್ ಬಗೇಲ್, ಮೃತಪಟ್ಟ ಮಹಿಳೆಯನ್ನು ಖುಷ್ಬೂ ಎಂದು ಗುರುತಿಸಲಾಗಿದೆ. ಖುಷ್ಬೂ ಅವರು ಶನಿವಾರ ಸಂಜೆ ಆಸ್ಪತ್ರೆಗೆ ಬಂದಿದ್ದಾರೆ. ಅಷ್ಟರಲ್ಲಿ ಅವರ ಪತಿ ರಾಹುಲ್ ಮೃತಪಟ್ಟ ವಿಷಯ ತಿಳಿದು ದಿಗ್ಬ್ರಾಂತರಾದ ಖುಷ್ಬೂ ನೇರವಾಗಿ ಆಸ್ಪತ್ರೆಯ ಮಹಡಿಯಿಂದ ಜಿಗಿದಿದ್ದಾರೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

- Advertisement -