ಕೋವಿಡ್ ನಿಂದ ಮೃತಪಟ್ಟ ತಾಯಿಯ ಚಿನ್ನದ ಕಿವಿಯೋಲೆ ನಾಪತ್ತೆ | ಮಂಗಳೂರು ವೆನ್ಲಾಕ್ ಆಸ್ಪತ್ರೆ ವಿರುದ್ಧ ಪುತ್ರನ ಆರೋಪ

Prasthutha: May 9, 2021

ಮಂಗಳೂರು : ನಗರದ ಜಿಲ್ಲಾ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯೊಬ್ಬರ ಚಿನ್ನದ ಕಿವಿಯೋಲೆ ನಾಪತ್ತೆಯಾಗಿದ್ದು, ಮೃತ ಮಹಿಳೆಯ ಮಗ ತನ್ನ ತಾಯಿಯ ಬಂಗಾರದ ಕಿವಿಯೋಲೆ ನಾಪತ್ತೆಯಾಗಿದೆ ಎಂದು ವೀಡಿಯೋ ಮೂಲಕ ಅಳಲು ತೋಡಿಕೊಂಡ ಘಟನೆ ನಡೆದಿದೆ.

ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಬೊಳ್ಳೂರು ನಿವಾಸಿ ಡೀಕಯ್ಯ ಪೂಜಾರಿ ಎಂಬವರು ತನ್ನ ತಾಯಿಯ ಬಂಗಾರದ ಕಿವಿಯೋಲೆ ನಾಪತ್ತೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕೋವಿಡ್ ನಿಂದ ಬಳಲುತ್ತಿದ್ದ ತನ್ನ ತಾಯಿಯನ್ನು ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಗದೆ ಮೇ 7ರಂದು ಅವರು ಮೃತಪಟ್ಟಿದ್ದಾರೆ. ಆಸ್ಪತ್ರೆಯವರು ಮೃತದೇಹ ಹಸ್ತಾಂತರ ಮಾಡುವ ವೇಳೆ ಕಿವಿಯೋಲೆ ನಾಪತ್ತೆಯಾಗಿದೆ ಎಂದು ಡೀಕಯ್ಯ ಪೂಜಾರಿ ಆರೋಪಿಸಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗಳಲ್ಲಿ ವಿಚಾರಿಸಿದಾಗ ಮೃತದೇಹದ ಫೋಟೋ ತೆಗೆಯಬೇಕಿತ್ತು ಎಂದು ಉಡಾಫೆಯಿಂದ ವರ್ತಿಸಿದ್ದಾರೆ.

ಈ ಬಗ್ಗೆ ತಾನು ಆಸ್ಪತ್ರೆಯ ಡಿಎಂಒ ಡಾ. ಸದಾಶಿವ ಈವರಿಗೆ ಲಿಖಿತ ದೂರು ನೀಡಿದ್ದರೂ ಇದುವರೆಗೆ ಯಾವ ಉತ್ತರವೂ ನಮಗೆ ದೊರಕಲಿಲ್ಲ. ನಾವು ತಾಯಿಯನ್ನು ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲೂ ಸಾಕಷ್ಟು ಹೊತ್ತು ನಮ್ಮನ್ನು ಹೊರಗಡೆ ನಿಲ್ಲಿಸಿ ಅಮಾನವೀಯತೆಯಿಂದ ವರ್ತಿಸಿದ್ದು, ತಾಯಿ ಉಸಿರಾಟದ ಸಮಸ್ಯೆಯಿಂದ ನರಳುತ್ತಿದ್ದರೂ ಆಸ್ಪತ್ರೆಯ ಸಿಬ್ಬಂದಿಗಳು ನಿರ್ಲಕ್ಷ್ಯ ತೋರಿದ್ದರು. ನಮಗೆ ಮಾತ್ರವಲ್ಲ, ಈ ಆಸ್ಪತ್ರೆಗೆ ಬರುವ ಎಲ್ಲರ ಸಮಸ್ಯೆಯೂ ಇದೇ ರೀತಿಯಾಗಿದೆ ಎಂದು ಅವರು ದೂರಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!