ಜ್ಞಾನವಾಪಿ ಮಸೀದಿಯ ASI ಸರ್ವೆ ವರದಿ ಅರ್ಜಿದಾರರಿಗೆ ನೀಡಿದ ನ್ಯಾಯಾಲಯ

Prasthutha|

ವಾರಾಣಸಿ: ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿ ಜಾಗದಲ್ಲಿ ಭಾರತೀಯ ಪುರಾತತ್ವ ಇಲಾಖೆ (ASI) ನಡೆಸಿದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ವಾರಾಣಸಿ ನ್ಯಾಯಲಯವು ಅರ್ಜಿದಾರರಿಗೆ ಮತ್ತು ಪ್ರತಿವಾದಿಗಳಿಗೆ ನೀಡಿದೆ.ಇದನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವಂತೆ ಹಾಗೂ ಬಹಿರಂಗಗೊಳಿಸದಂತೆಯೂ ಸೂಚಿಸಿದೆ.

- Advertisement -

ದೇವಾಲಯ ಮೂಲ ತಳಪಾಯದ ಮೇಲೆ 17ನೇ ಶತಮಾನದಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಹಿಂದೂ ಪರ ಅರ್ಜಿದಾರರ ವಾದವನ್ನು ವಾರಾಣಸಿ ನ್ಯಾಯಾಲಯ ಪುರಸ್ಕರಿಸಿ ಜಾಗದ ವೈಜ್ಞಾನಿಕ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚಿಸಿತ್ತು.

ಅದರಂತೆ ವೈಜ್ಞಾನಿಕ ಸಮೀಕ್ಷೆ ನಡೆಸಿದ ASI ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಡಿ. 18ರಂದು ಸಲ್ಲಿಸಿತ್ತು. ಆದರೆ 4 ವಾರಗಳ ಕಾಲ ಅದನ್ನು ಬಹಿರಂಗಪಡಿಸದಂತೆ ASI ನ್ಯಾಯಲಯವನ್ನು ಕೋರಿತ್ತು.

Join Whatsapp